ದೇವಣಗಾಂವದಲ್ಲಿ ಸರಣಿ ಕಳ್ಳತನ

ದೇವಣಗಾಂವ: ಗ್ರಾಮದ ಎಂಟು ಮನೆಗಳಿಗೆ ಸೋಮವಾರ ರಾತ್ರಿ ಕಳ್ಳರು ಕನ್ನ ಹಾಕಿ ಕೈ ಚಳಕ ತೋರಿಸಿದ್ದಾರೆ.

ಗ್ರಾಮದ ಬಸವರಾಜ ನಾಗಪ್ಪ ಪೂಜಾರಿ ಅವರ ಮನೆಯಲ್ಲಿನ 15 ಗ್ರಾಂ ಚಿನ್ನ, 110 ಗ್ರಾಂ ಬೆಳ್ಳಿ, ಸ್ವಾಮಿನಾಥ ಶಂಕರ ಭಿಂಗೆ ಅವರ ಮನೆಯಲ್ಲಿನ 5 ಗ್ರಾಂ ಚಿನ್ನದ ಬಳೆಗಳು, 5 ಗ್ರಾಂ ಚಿನ್ನದ ಉಂಗುರ, 57 ಸಾವಿರ ರೂ. ನಗದು ದೋಚಿದ್ದಾರೆ. ಸಾಹೇಬಗೌಡ ಭೀಮರಾಯ ಕಟ್ಟಿ ಮನೆ ಮುಂಭಾಗ ನಿಲ್ಲಿಸಿದ್ದ ಹೊಂಡಾ ಶೈನ್ ಬೈಕ್ ಕಳ್ಳತನವಾಗಿದೆ. ಇನ್ನುಳಿದಂತೆ ಶಿವಶರಣ ಹನುಮಂತಪ್ಪ ಭೂಸನೂರ, ರವಿಕುಮಾರ ಶರಣಪ್ಪ ಗಂಗನಳ್ಳಿ, ಬಸವರಾಜ ನಿಂಬಾಳ, ಶಂಕ್ರಪ್ಪ ಬಾಗೇವಾಡಿ, ಕೆಂಚಪ್ಪ ಪೂಜಾರಿ ಮನೆಗಳ ಬೀಗ ಮುರಿದು ಹಣ, ಒಡವೆಗಳಿಗಾಗಿ ಶೋಧ ನಡೆಸಿ ಇದ್ದ ಅಲ್ಪ ಸ್ವಲ್ಪ ನಗದು ಮತ್ತು ವಸ್ತುಗಳನ್ನು ದೋಚಿ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಹೋಗಿದ್ದಾರೆ.

ಹೊಸವರ್ಷದ ಸಂಭ್ರಮದಲ್ಲಿದ್ದ ಜನರನ್ನು ಕಳ್ಳರ ಕೃತ್ಯ ಬೆಚ್ಚಿ ಬೀಳಿಸಿದೆ. ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಿ ಜನರ ಭಯ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ. ತೀವ್ರ ಚಳಿಯಿಂದಾಗಿ ಜನರು ಮನೆಯಲ್ಲಿ ಬೆಚ್ಚಗೆ ಮಲಗಿರುವುದನ್ನೇ ಗಮನಿಸಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಆಲಮೇಲ ಠಾಣೆ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

Leave a Reply

Your email address will not be published. Required fields are marked *