ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ

ದೇವಣಗಾಂವ: ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಗ್ರಾಮದಿಂದ ಕಡ್ಲೇವಾಡ (ಪಿಎ) ಗ್ರಾಮಕ್ಕೆ ಹೋಗುವ ವರ್ತಲ ರಸ್ತೆಯಲ್ಲಿ ಗಣಪತಿ ಹೂಗಾರ ಎಂಬುವವರಿಗೆ ಸೇರಿದ ಟ್ರಾಲಿ ಉರುಳಿ ಬಿದ್ದಿದೆ. ಕಬ್ಬು ಚೆಲ್ಲಾಪಿಲ್ಲಿಯಾಗಿ 3 ಗಂಟೆ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ವರ್ತಲ ರಸ್ತೆ ತುಂಬ ಗುಂಡಿಗಳೇ ಹೆಚ್ಚಾದ ಪರಿಣಾಮ ಈ ರೀತಿ ಅಪಾಯಗಳು ಸಂಭವಿಸುತ್ತಿವೆ. ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.