ನೆಮ್ಮದಿ ಕೇಂದ್ರಕ್ಕೆ ಬೆಂಕಿ, 3 ಕಂಪ್ಯೂಟರ್ ಭಸ್ಮ

 

ದೇವದುರ್ಗ: ಪಟ್ಟಣದ ತಹಸಿಲ್ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕದಿಂದ 3 ಕಂಪ್ಯೂಟರ್‌ಗಳು, ದಾಖಲೆಗಳು ಭಸ್ಮವಾಗಿವೆ.

ಆ.6 ರ ಮಧ್ಯರಾತ್ರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿಗೆ ನಿಗದಿಪಡಿಸಿದ್ದ ಕೊಠಡಿ ಸಂಖ್ಯೆ 8ರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿದೆ ಎಂದು ಹೇಳಲಾಗಿದೆ. ಜಾತಿ, ಆದಾಯ ಪ್ರಮಾಣದ ದಾಖಲಾತಿಗಳಿದ್ದ 2, ಪಹಣಿಗೆ ಸಂಬಂಧಿಸಿದ 1 ಕಂಪ್ಯೂಟರ್, ದಾಖಲಾತಿಗಳು ಬೆಂಕಿಗೆ ಅಹುತಿಯಾಗಿವೆ. ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದ ಕೊಠಡಿಯಲ್ಲಿದ್ದ ದಾಖಲೆಗಳಿಗೆ ಹಾನಿಯಾಗಿಲ್ಲ. ಸ್ಥಳಕ್ಕೆ ಸಿಪಿಐ ಸಂಜೀವ ಕುಮಾರ ತ್ರಿಲೋಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ ಎಂದು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *