ಕಾಲುವೆ ಒಡೆದು ಭತ್ತ ಹಾನಿ

ದೇವದುರ್ಗ (ರಾಯಚೂರು): ಸಮೀಪದ ಆಲ್ದರ್ತಿ ಗ್ರಾಮದ ಬಳಿ ನಾರಾಯಣಪುರ ಮುಖ್ಯ ಕಾಲುವೆ ಒಡೆದ ಪರಿಣಾಮ ಸೋಮವಾರ ಅಪಾರ ಪ್ರಮಾಣದ ನೀರು ಹೊಲಗದ್ದೆಗೆ ಹರಿದು ಅಂದಾಜು 50 ಎಕರೆ ಭತ್ತದ ಜಮೀನು ಜಲಾವೃತಗೊಂಡಿದೆ. ರೈತರ ಹೋರಾಟದ ಫಲವಾಗಿ ಡಿ.8ರಿಂದ ಕಾಲುವೆಯ 16, 17 ಮತ್ತು 18 ನೇ ವಿತರಣಾ ಕಾಲುವೆಗಳ ರೈತರ ಜಮೀನುಗಳಿಗೆ ನೀರು ಹರಿಸಲು ಬಸವಸಾಗರ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಆದರೆ, ಸೋಮವಾರ 17ನೇ ವಿತರಣೆಯಲ್ಲಿ ನಾಲೆ ಒಡೆದು ಅಪಾರ ಪ್ರಮಾಣದ ನೀರು ಹೊಲಗದ್ದೆಗೆ ಹರಿದು, ರೈತರ ಕಣ್ಣುದುರೇ ಜಮೀನಿನಲ್ಲಿ ಬೆಳೆದಿದ್ದ ಭತ್ತ ಬೆಳೆ ನಷ್ಟವಾಗಿದೆ.