ಮತ್ತೆ ಉಕ್ಕಿ ಹರಿದ ಕೃಷ್ಣಾ ನದಿ, 2 ಲಕ್ಷ ಕ್ಯೂಸೆಕ್ ದಾಟಿದ ನೀರು

ದೇವದುರ್ಗ: ತಾಲೂಕಿನ ರೈತರಿಗೆ ಕೃಷ್ಣಾ ನದಿ ಸದ್ಯಕ್ಕೆ ನೆಮ್ಮದಿ ನೀಡುವಂತೆ ಕಾಣುತ್ತಿಲ್ಲ. ಎರಡ್ಮೂರು ದಿನಗಳಿಂದ ಶಾಂತವಾಗಿದ್ದ ಕೃಷ್ಣಾ ನದಿ ಬುಧವಾರ ರಾತ್ರಿಯಿಂದ 2.03 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು, ಅನ್ನದಾತರ ನೆಮ್ಮದಿ ಕಸಿದಿದೆ.

ಮಹಾರಾಷ್ಟ್ರ ಸೇರಿ ನದಿ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಕಳೆದು ಒಂದು ವಾರದಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಳಿತ ಕಾಣುತ್ತಿದೆ. ಗುರುವಾರ ಬೆಳಗ್ಗೆಯಿಂದ ನಾರಾಯಪುರ ಜಲಾಶಯದಿಂದ ಕೃಷ್ಣಾ ನದಿಗೆ 2.03 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೂವಿನಹೆಡಗಿ ಸೇತುವೆ ಮುಳುಗಡೆ ಹಂತಕ್ಕೆ ನೀರು ಹರಿಯುತ್ತಿದೆ.

ಎರಡು ದಿನಗಳಿಂದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ಇಳಿಕೆ ಕಂಡಿದ್ದ ನೀರು, ಈಗ ಸಂಪೂರ್ಣ ದೇವಸ್ಥಾನ ಮುಳುಗಿದೆ. ನೀರಿನ ಏರಿಳಿತ ನದಿದಂಡೆ ಗ್ರಾಮಗಳ ಜನರಲ್ಲಿ ಆತಂಕ ತಂದೊಡ್ಡಿದೆ. ನೆರೆಯಿಂದ ಸಂತ್ರಸ್ತರಾದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

 

ಮಹಾರಾಷ್ಟ್ರ ಸೇರಿ ನದಿದಂಡೆ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಕೃಷ್ಣಾ ನದಿಗೆ 2.03 ಲಕ್ಷ ನೀರು ಹರಿಬಿಡಲಾಗಿದ್ದು, ಎರಡ್ಮೂರು ದಿನ ಇದೇ ಪ್ರಮಾಣದ ನೀರು ಹರಿಯಲಿದೆ.
| ರಾಮನಗೌಡ ಹಳ್ಳೂರು ಕೆಬಿಜೆಎನ್‌ಎಲ್, ಎಇಇ

Leave a Reply

Your email address will not be published. Required fields are marked *