ಜಾಲಹಳ್ಳಿಯಲ್ಲಿ ಸರಣಿ ಕಳ್ಳತನ

ದೇವದುರ್ಗ: ಜಾಲಹಳ್ಳಿ ಪೊಲೀಸ್ ಠಾಣೆ ಪಕ್ಕದಲ್ಲಿನ ಆರು ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಲಾಗಿದೆ. ಸೋಮವಾರ ತಡರಾತ್ರಿ ವೈನ್ ಶಾಪ್, ಬಟ್ಟೆ ಅಂಗಡಿ, ಫೊಟೋ ಸ್ಟುಡಿಯೋ ಮತ್ತು ಗೊಬ್ಬರ ಅಂಗಡಿಯ ಗೋದಾಮು ಸೇರಿ ಆರು ಅಂಗಡಿಗಳ ಕಳ್ಳತನ ನಡದಿದೆ. ಘಟನಾ ಸ್ಥಳಕ್ಕೆ ಸಿಪಿಐ ಸಂಜೀವಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಆರರಿಂದ ಏಳು ಮಂದಿ ಕಬ್ಬಿಣದ ರಾಡ್‌ನಿಂದ ಬೀಗ ಮುರಿಯುತ್ತಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣವನ್ನು ಭೇದಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದರು.