More

  ಕ್ಷಯಮುಕ್ತ ಭಾರತ ಅಭಿಮಾನಕ್ಕೆ ಕೈಜೋಡಿಸಲು ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಮರೇಶ ಸಲಹೆ

  ದೇವದುರ್ಗ: ಕ್ಷಯ ಗುಣಮುಖವಾಗುವ ರೋಗವಾಗಿದ್ದು, ರೋಗಿಗಳ ಕಾಳಜಿ ಮಾಡಬೇಕಿದೆ. ಆರೋಗ್ಯ ಇಲಾಖೆ 2025 ರೊಳಗೆ ಕ್ಷಯಮುಕ್ತ ಭಾರತ ನಿರ್ಮಾಣ ಗುರಿ ಹಾಕಿಕೊಂಡಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಕ್ಷಯ ರೋಗ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ ಹೇಳಿದರು.

  ತಾಲೂಕಿನ ಹಿರೇಬೂದೂರಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಕ್ಷಯರೋಗ ಘಟಕ, ತಾಪಂ, ಗ್ರಾಪಂನಿಂದ ಬುಧವಾರ ಆಯೋಜಿಸಿದ್ದ ಕ್ಷಯ ಮುಕ್ತ ಗ್ರಾಪಂ ಅಭಿಯಾನದಲ್ಲಿ ಮಾತನಾಡಿದರು. ವೈದ್ಯಾಧಿಕಾರಿ ಡಾ.ಅಯ್ಯಣ್ಣ ಮಾತನಾಡಿ, ಟಿಬಿ ಲಕ್ಷಣಗಳು ಇರುವವರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಬೇಕು. ಉಚಿತವಾಗಿ ಚಿಕಿತ್ಸೆ ಮತ್ತು ಪ್ರತಿ ತಿಂಗಳು ಪೌಷ್ಟಿಕ ಆಹಾರ ಸೇವನೆಗೆ 500 ರೂ. ಪ್ರೋತ್ಸಾಹ ಧನ ಪಡೆದು, ಗುಣವಾದಾಗ ಕ್ಷಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

  ಗ್ರಾಪಂ ಅಧ್ಯಕ್ಷೆ ದೇವೇಂದ್ರಮ್ಮ ದಂಡಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರವಿಶುಕ್ಲ, ಪಿಡಿಒ ಕಿರಣ್‌ಬಾಬು, ಗ್ರಾಪಂ ಸದಸ್ಯರಾದ ಬಸಲಿಂಗಪ್ಪ, ಮಲ್ಲಮ್ಮ, ಕಾತುನಬಿ, ನೀಲಮ್ಮ, ಬಂದಪ್ಪ, ಶಿವಶರಣಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಚಸ್ಮುದ್ದೀನ್, ಭಿಮೇಶಪ್ಪ, ಮೌನೇಶ್, ಹನುಮಂತು, ಅನ್ನಪೂರ್ಣಾ, ಮಲ್ಲಮ್ಮ, ಸವಿತಾ, ಅಭಿಜಿತ್, ಶರಣ್ ಬಸವ, ದೇವೇಂದ್ರಪ್ಪ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts