ಕೊಳೆತ ಸ್ಥಿತಿಯಲ್ಲಿ ಮಂಗನ ಕಳೇಬರ ಪತ್ತೆ

ಸಕಲೇಶಪುರ: ತಾಲೂಕಿನ ಬಿರಡಹಳ್ಳಿ ಗ್ರಾಮದ ಭೈರಪ್ಪ ಎಂಬುವರ ಕಾಫಿ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ದೇಹ ಪತ್ತೆಯಾಗಿದೆ.

ಮೂರು ದಿನಗಳ ಹಿಂದೆಯೆ ಮಂಗ ಮೃತಪಟ್ಟಿರುವ ಶಂಕೆ ಇದ್ದು, ಭಾನುವಾರ ತೋಟದ ಮಾಲೀಕರು ಇದನ್ನು ಗಮನಿಸಿ ತಾಲೂಕು ಆಡಳಿತಕ್ಕೆ ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ್ದ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ದೇಹ ಕೊಳತೆ ಸ್ಥಿತಿಯಲ್ಲಿದ್ದ ಕಾರಣ ಮರಣೋತ್ತರ ಪರೀಕ್ಷೆ ನಡೆಸದೆ ಸ್ಥಳದಲ್ಲೆ ಸುಟ್ಟ ಹಾಕಲಾಯಿತು. ಮಂಗನ ದೇಹದಲ್ಲಿದ್ದ ಉಣ್ಣೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಹೇಳಿದ್ದಾರೆ.