ಆಕ್ರಮಣಗಳಾದರೂ ಹಿಂದು ಧರ್ಮ ಶಕ್ತಿಯುತ

blank

ಸಾಗರ: ನಮ್ಮದು ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸವನ್ನು ಬಿತ್ತಿದ ಹಿಂದು ಧರ್ಮ. ನಮ್ಮ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆದರೂ ಕುಗ್ಗಲಿಲ್ಲ. ಇದು ನಮ್ಮ ಧರ್ಮದ ಶಕ್ತಿ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಾಗರದ ಗಾಂಧಿ ಮೈದಾನದಲ್ಲಿ ಸೋಮವಾರ ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಏರ್ಪಡಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಹಿಂದು ಧರ್ಮದ ಬಗ್ಗೆ ಮಾತನಾಡುವುದು ತಪ್ಪಾ? ಅದನ್ನೇ ಪ್ರಚೋದನಕಾರಿ ಎಂದು ಬಿಂಬಿಸಿ ನನ್ನ ಮೇಲೆ ದೂರುಗಳು ದಾಖಲಿಸಲಾಗುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಸತ್ಯವನ್ನೇ ಹೇಳುತ್ತ ಮುನ್ನಡೆಯುತ್ತೇನೆ ಎಂದರು.
ಛತ್ರಪತಿ ಶಿವಾಜಿ ಆಸ್ಥಾನದ ಮಂತ್ರಿ ರಾಜಾರಾಮನಿಗೆ ಔರಂಗಜೇಬನಿಂದ ಅಪಾಯ ಎದುರಾದಾಗ ಅವರಿಗೆ ರಕ್ಷಣೆ ನೀಡಿ ಔರಂಗಜೇಬನ ಸೈನ್ಯವನ್ನು ಹಿಮ್ಮೆಟ್ಟಿಸಿದಳು ಕೆಳದಿಯ ರಾಣಿ ಚನ್ನಮ್ಮ ಎಂಬುದು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ನನ್ನದು ಪ್ರೀತಿಯ ಭಾಷಣವೇ ಹೊರತು ದ್ವೇಷದ್ದಲ್ಲ. ನಮ್ಮ ಧರ್ಮ ಎಲ್ಲರನ್ನು, ಎಲ್ಲವನ್ನೂ ಸಹಿಸಿಕೊಂಡು ತನ್ನತನವನ್ನು ಗಟ್ಟಿಯಾಗಿ ಇಟ್ಟುಕೊಂಡಿದೆ. ಶಿವಾಜಿ ಮಹಾರಾಜ ಎಲ್ಲ ಜಾತಿಗಳನ್ನು ಒಟ್ಟಾಗಿಸಿ ಹಿಂದು ಧರ್ಮದ ಮೌಲ್ಯ ಎತ್ತಿಹಿಡಿದರು. ನಮ್ಮ ಕಾರ್ಯಕರ್ತರು ಗೋ ಸಂರಕ್ಷಣೆಗಾಗಿ ದೂರು ದಾಖಲಿಸಿದಾಗ ಅವರ ಪರವಾಗಿ ನಿಲ್ಲಬೇಕು. ಪಲಾಯನ ಮಾಡಬೇಡಿ ಎಂದು ತಿಳಿಸಿದರು.
ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು 12ನೇ ಶತಮಾನದಲ್ಲಿ ಬದುಕಿನ ಮಹತ್ವವನ್ನು ಪರಿಚಯಿಸಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮ ನಮಗೆ ಆತ್ಮಸ್ಥೈರ್ಯ ತುಂಬುತ್ತವೆ. ಶರಣರು, ದಾರ್ಶನಿಕರು, ಸಂತರು ಹೇಗೆ ಧ್ಯಾನ, ಪೂಜೆ ಮುಂತಾದ ಧಾರ್ಮಿಕ ಸಂಗತಿಗಳನ್ನು ಕಟ್ಟಿಕೊಡುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿಗೆ ಕುಂಭಮೇಳವೇ ಸಾಕ್ಷಿ. ಇಂದಿನ ಯುವಜನರು ಸತ್ಯ, ಶುದ್ಧ ಕಾಯಕದಲ್ಲಿ ತೊಡಗಿ ರಾಷ್ಟ್ರವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಬೇಕು ಎಂದರು.
ವಿಎಚ್‌ಪಿ ಜಿಲ್ಲಾ ಸಂಚಾಲಕಿ ಪ್ರತಿಮಾ ಜೋಗಿ, ಸಂತೋಷ್ ಶಿವಾಜಿ, ಸುನಿಲ್, ನವೀನ್, ಶ್ವೇತಾ ಅನಿಲ್ ಇತರರಿದ್ದರು.

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…