More

    ಅತಿ ಆಸೆ, ಅತೃಪ್ತಿ ಭವಿಷ್ಯಕ್ಕೆ ಆತಂಕ: ಡಾ. ಶ್ರೀ ಗುರುಬಸವ ಸ್ವಾಮೀಜಿ ಅಭಿಪ್ರಾಯ

    ಚನ್ನಗಿರಿ: ಸಮಾಜ, ಪರಿಸರದಲ್ಲಿ ನಮ್ಮ ಜೀವನಕ್ಕೆ ಬೇಕಾದ ವ್ಯವಸ್ಥೆಗಳು ಇದ್ದರೂ ನಮ್ಮಲ್ಲಿ ಅತಿ ಆಸೆ ಮತ್ತು ಅತೃಪ್ತಿ ಇದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

    ತಾಲೂಕು ಪಾಂಡೋಮಟ್ಟಿ ವಿರಕ್ತಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮ ಮತ್ತು ಬಸವಾದಿ ಸರ್ವಶರಣ, ಶರಣೆಯರ ಸ್ಮರಣೋತ್ಸವ ಹಾಗೂ ಜೇನುಹಬ್ಬ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶರಣರು ಜೀವನದ ಸ್ವಾರ್ಥ, ಆಸೆ ತೊರೆದು ಜನರ ಕಲ್ಯಾಣದ ಕಡೆಗೆ ಗಮನ ನೀಡಿದ್ದರಿಂದ ಕಲ್ಯಾಣ ರಾಜ್ಯ ಸ್ಥಾಪಿತವಾಯಿತು. ಶರಣರು ಮಾಡಿದ ಸೇವೆಯನ್ನು ಇಂದು ಯಾರು ಮಾಡಲು ಆಗದು. ಅತಿ ಆಸೆ ಮತ್ತು ಅತೃಪ್ತಿ ಭವಿಷ್ಯಕ್ಕೆ ತೊಂದರೆ ಎಂದರು.

    ಶ್ರದ್ಧೆ ಹಾಗೂ ಭಕ್ತಿ ಇರಬೇಕು

    ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಮನಸ್ಸನ್ನು ಏಕಾಗ್ರತೆಗೆ ತರಬೇಕಾಗಿದೆ. ಜೀವನದಲ್ಲಿ ತಾಳ್ಮೆ, ಸಹನೆ, ಬದ್ಧತೆ, ಶ್ರದ್ಧೆ ಹಾಗೂ ಭಕ್ತಿ ಇರಬೇಕು ಎಂದರು.

    ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಯಾವುದೇ ವ್ಯಕ್ತಿ ತನ್ನಲ್ಲಿರುವ ಜ್ಞಾನವನ್ನು ಬೇರೆಯವರಿಗೆ ಧಾರೆ ಎರೆಯಬೇಕು.

    ಸಮಾಜದಲ್ಲಿ ಸಂಸ್ಕಾರ ಬಿತ್ತಲು, ಅನುಷ್ಠಾನಗೊಳಿಸಲು ಕುಟುಂಬ ಮತ್ತು ಮಠಗಳ ಜವಾಬ್ದಾರಿ ಹೆಚ್ಚಾಗಿದೆ ಎಂದರು.

    ಮನೆಗೊಂದು ಗಿಡ, ತೋಟಕ್ಕೆ ಒಂದು ಜೇನು

    ಪ್ರಗತಿಪರ ರೈತ ಭೈರೇಶ್ ಮಾತನಾಡಿ, ಜೇನು ನೊಣದ ಕೃಷಿಯಿಂದ ವಷರ್ದಲ್ಲಿ 6 ಬೆಳೆ ಪಡೆಯಬಹುದು. ಒಂದು ಜೇನುಗೂಡಿನಿಂದ ಒಂದು ಬೆಳೆಗೆ 4 ಕೆಜಿ ಜೇನು ತುಪ್ಪ ಪಡೆಯಬಹುದು.

    ಒಂದು ರಾಣಿಜೇನು ಒಂದು ಸ್ಥಳದಿಂದ 3 ಕಿಮೀ ಕ್ರಮಿಸಿ ಪರಾಗಸ್ಪರ್ಶ ಮಾಡುತ್ತದೆ. ಒಂದು ಜೇನು ನೊಣ ಒಂದು ದಿನಕ್ಕೆ 2 ಸಾವಿರ ಹೂವಿನರಸ ಹೀರುತ್ತದೆ.

    ಪರಾಗಸ್ಪರ್ಶ ಇಲ್ಲದೇ ಯಾವುದೇ ಕಾಯಿ ಬೆಳೆಯುವುದಿಲ್ಲ. ಮನೆಗೊಂದು ಗಿಡ, ತೋಟಕ್ಕೆ ಒಂದು ಜೇನು ಬೆಳೆಸಬೇಕು ಎಂದರು.

    ಕೀಟಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ, ನಲ್ಕುದುರೆ ಮಹಿಳಾ ಪ್ರಗತಿಪರ ರೈತರಾದ ಎಂ.ಜಿ.ಶಶಿಕಲಾ ಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರ ಅಥರ್ಗ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts