ಸೀರೆ ಧರಿಸಿ, ರವಿಕೆ ತೊಡದೆ ಟ್ರೋಲ್​ಗೆ ಗುರಿಯಾಗಿದ್ದ ಪಿಗ್ಗಿ: ಪ್ರಿಯಾಂಕರನ್ನು ಹಾಡಿ ಹೊಗಳಿದ ಡಿಸೈನರ್​

ನವದೆಹಲಿ: ತಮ್ಮ ಡ್ರೆಸಿಂಗ್​ ಸೆನ್ಸ್​ ಮೂಲಕವೇ ಸಾಕಷ್ಟು ವಿವಾದಕ್ಕೀಡಾಗುವ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಅವರು ಮತ್ತೊಮ್ಮೆ ಅದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಇನ್​ಸ್ಟೈಲ್​ ಎಂಬ ಮ್ಯಾಗಜಿನ್​ನ ಜುಲೈ ತಿಂಗಳ​ ಕವರ್​ ಫೋಟೋಗೆ ಪಿಗ್ಗಿ ನೀಡಿರುವ ಪೋಸ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಡಿಸೈನರ್​ ತರುಣ್​ ತಹಿಲಿಯಾನಿ ಎಂಬುವರು ಮಾಡಿರುವ ಪ್ರಿಯಾಂಕ ಉಡುಪಿನ ವಿನ್ಯಾಸ ತೀವ್ರ ಟೀಕೆಗೆ ಗುರಿಯಾಗಿದ್ದು, ತಹಿಲಿಯಾನಿ ಅವರೇ ಪಿಗ್ಗಿಯನ್ನು ಹಾಗೂ ತಮ್ಮ ವಿನ್ಯಾಸವನ್ನು ಸಮರ್ಥಿಸಿಕೊಂಡಿದ್ದಾರೆ.

ಕವರ್​ ಫೋಟೋಗೆ ನೀಡಿರುವ ಪೋಸ್​ನಲ್ಲಿ ಸೀರೆ ತೊಟ್ಟಿರುವ ಪ್ರಿಯಾಂಕ, ಮೇಲಿನ ರವಿಕೆಯನ್ನೇ ಧರಿಸಿಲ್ಲ. ಹಿಂದು ಸಂಪ್ರದಾಯದಲ್ಲಿ ಸೀರೆ ಉಟ್ಟರೆ, ರವಿಕೆ ತೊಡುವುದು ವಾಡಿಕೆ. ಹೀಗಾಗಿ ಇದು ನೆಟ್ಟಿಗರು ಕೆಂಗಣ್ಣಿಗೆ ಗುರಿಯಾಗಿದ್ದು, ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ಸಾಮಾನ್ಯವಾಗಿ ಯಾವುದೇ ಟ್ರೋಲ್​ಗೆ ಪಿಗ್ಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಆದರೆ, ಡಿಸೈನರ್ ತಹಿಲಿಯಾನಿ ಪಿಗ್ಗಿ ಹಾಗೂ ತಮ್ಮ ವಿನ್ಯಾಸವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ತಹಿಲಿಯಾನಿ, ಇದರಲ್ಲಿ ಅಸಭ್ಯವಾದದ್ದು ಏನೂ ಇಲ್ಲ. ಹೌದು, ಇಲ್ಲಿ ರವಿಕೆಯನ್ನು ಬಳಸಿಲ್ಲ. ಇದನ್ನೇ ಜಾಗತಿಕ ಹೇಳಿಕೆಯನ್ನಾಗಿ ಮಾಡುವಿರಾ? ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ಮ್ಯಾಗಜಿನ್​​ ಕವರ್​ ಫೋಟೋಗಾಗಿ ಭಾರತೀಯ ಸೌಂದರ್ಯವನ್ನು ಆಧುನಿಕ ದೇವತೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಅವಳ ಪ್ರತಿಭೆಯ ಬಗ್ಗೆ ತಿಳಿಸಲು ಮಾತ್ರ ಈ ರೀತಿ ಮಾಡಲಾಗಿದೆ. ನಿಜವಾಗಿಯೂ ಅವಳು ಆಧುನಿಕ ಭಾರತದ ಐಕಾನ್​ ಎಂದು ಪ್ರಿಯಾಂಕರನ್ನು ತಹಿಲಿಯಾನಿ ಹಾಡಿ ಹೊಗಳಿದ್ದಾರೆ. ಅಲ್ಲದೇ, ಸೀರೆಯನ್ನು ಪ್ರಿಯಾಂಕ ಅವರ ಖ್ಯಾತಿಯಿಂದ ಜಾಗತಿಕ ಮಟ್ಟದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಒಂದು ವಾರದ ಹಿಂದಷ್ಟೇ ಪ್ರಿಯಾಂಕ ಅವರು ತಮ್ಮ ಟ್ವಿಟರ್​ ಮೂಲಕ ಮ್ಯಾಗಜಿನ್​ ಕವರ್​ ಫೋಟೋ ಅನಾವರಣ ಮಾಡಿದ್ದರು. ಬಳಿಕ ಸಾಕಷ್ಟು ಟ್ರೋಲ್​ ಆಗಿತ್ತು. ಒಂದಿಷ್ಟು ಟ್ರೋಲ್​ ಕೆಳಗಿನಂತಿದೆ. (ಏಜೆನ್ಸೀಸ್​​)

View this post on Instagram

“Only Priyanka Chopra could bring her insouciance that she carries and take the alluring sultry persona from Bajirao Mastani across oceans and lands with the same surefooted agility on the cover of INSTYLE. Taking the saree global, proud of her identity and the versatility of the saree – a metaphor for her own versatility.The face of India globally.” — The India Modern Icon. @priyankachopra wears a fluid, hand-embroided couture saree in sequins, gota and tiny Swarovski crystals for the June 2019 cover of @instylemagazine. Photography: @robbiefimmano Styling: @juliavonboehm Makeup: @yumi_mori Hair: @harryjoshhair Nails: @pattieyankee #TarunTahiliani #PriyankaChopra #InStyle #InStyleMagazine #TTCouture #Couture #IndiaModern

A post shared by Tarun Tahiliani (@taruntahiliani) on

Leave a Reply

Your email address will not be published. Required fields are marked *