ಜಿಲ್ಲಾ ಆರೋಗ್ಯ ಇಲಾಖೆಗೆ ಬೇಕು ತುರ್ತು ಚಿಕಿತ್ಸೆ!

blank

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಎಂಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಟಿಎಂಟಿ, ರೇಡಿಯಾಲಜಿ, ಕಾರ್ಡಿಯಾಲಜಿ ವೈದ್ಯರು, ಶುಶ್ರೂಷಕಿಯರು, ಎಬಿಸಿಡಿ ದರ್ಜೆ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹೀಗೆ ಜಿಲ್ಲಾ ಆರೋಗ್ಯ ಇಲಾಖೆಯ ಖಾಲಿಗಳ ಪಟ್ಟಿ ಮುಂದುವರಿಯುತ್ತದೆ. ಸೌಲಭ್ಯವೇ ಇಲ್ಲದ ಸರ್ಕಾರಿ ಆಸ್ಪತ್ರೆಗಳಿಗೆ ಏಕೆ ಹೋಗಬೇಕು? ಬಳಿಬಣ್ಣದ ಮಾತ್ರೆ ನುಂಗುವುದಕ್ಕಾ? ಇದು ಜನ ಕೇಳುತ್ತಿರುವ ಪ್ರಶ್ನೆ.

ಆಯುಷ್ಮಾನ್, ಆಯುರ್ವೇದ ಡಿಸ್ಪೆನ್ಸರಿ ಹೀಗೆ ಕೊರತೆ ಪಟ್ಟಿ ಇನ್ನೂ ಇದೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ,ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಸಾರ್ವಜನಿಕರು ಭ್ರಮೆ ನಿರಸನಗೊಂಡಿದ್ದಾರೆ.

ಕರೋನಾ ಬಾಧಿತರ ಸಾಗಾಟಕ್ಕೆ ಪ್ರತ್ಯೇಕ ಆಂಬುಲೆನ್ಸ್ ಇಲ್ಲ. ಡಯಾಲಿಸಿಸ್‌ಗೆ ಕರೋನಾ, ಸಾಮಾನ್ಯ ರೋಗಿಗಳಿಗೆ ಒಂದೇ ಯಂತ್ರ. ಜಿಲ್ಲಾಸ್ಪತ್ರೆಗೆ ತಾಲೂಕು ಕೇಂದ್ರದಿಂದ ರೋಗಿಗಳನ್ನು ಕಳುಹಿಸಿದರೆ ತಕ್ಷಣ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಶಿಪಾರಸ್ಸು ಮಾಡುವುದಾದರೆ ಜಿಲ್ಲಾಸ್ಪತ್ರೆ ಏಕೆ ಬೇಕು? ಕುಂದಾಪುರ ತಾಲೂಕಿಗೆ ತಾಲೂಕು ಆರೋಗ್ಯಾಧಿಕಾರಿಯೇ ಇಲ್ಲ.

ಜಿಲ್ಲೆಗೆ ಮಂಜೂರಾದ ಅರಿವಳಿಕೆ ತಜ್ಞರ ಸಂಖ್ಯೆ 9, ಬೈಂದೂರು ಹಾಗೂ ನಿಟ್ಟೆಯಲ್ಲಿ ಅರಿವಳಿಕೆ ತಜ್ಞರಿಲ್ಲ. ಮಕ್ಕಳ ತಜ್ಞರು 8 ಮಂಜೂರಾಗಿದ್ದರೂ ಶಿರ್ವ,ಹೆಬ್ರಿಯಲ್ಲಿ ತಜ್ಞರಿಲ್ಲ. ರೇಡಿಯಾಜಿಸ್ಟ್ ಮೂರರಲ್ಲಿ 2 ಇದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಈ ಹುದ್ದೆ ಖಾಲಿ. ಹಿರಿಯ ವೈದ್ಯಾಧಿಕಾರಿಗಳ ಸಂಖ್ಯೆ 8. ಬೈಂದೂರು ಹೆಬ್ರಿ ಆಸ್ಪತ್ರೆಯಲ್ಲಿ ಈ ಕುರ್ಚಿ ಖಾಲಿ. ಸಾಮಾನ್ಯ ಕರ್ತವ್ಯ ನಿರ್ವಹಿಸುವ ವೈದ್ಯರ ಸಂಖ್ಯೆ 64, ಹೆಬ್ರಿ ಮತ್ತು ಆವರ್ಸೆಯಲ್ಲಿ ಇಲ್ಲ. ತುರ್ತು ಚಿಕಿತ್ಸೆ, ಅಪಘಾತ ವೈದ್ಯಕೀಯ ಚಿಕಿತ್ಸೆ ಪೋಸ್ಟ್ 8, ಕಾರ್ಕದಲ್ಲಿ 2, ಕುಂದಾಪುರದಲ್ಲಿ 1 ಇಲ್ಲ. ಉಡುಪಿ ಜಿಲ್ಲೆಯಲ್ಲಿ ವಿವಿಧ ವಿಭಾಗದಲ್ಲಿ ಸರ್ಕಾರ ಮಂಜೂರು ಮಾಡಿದ್ದು, ವೈದ್ಯರು 135ರಲ್ಲಿ 117 ಭರ್ತಿ. 18 ಸ್ಥಾನ ಖಾಲಿ. ಸಹಾಯಕ ಆಡಳಿತಾಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಶುಶ್ರೂಷಣಾಧಿಕಾರಿ, ಸಹಾಯಕ ಎಂಟಮೊಲೋಜಿಸ್ಟ್, ಮೈಕ್ರೊ ಬಯಾಲಜಿಸ್ಟ್, ನರ್ಸಿಂಗ್ ಸೂಪರ್‌ಡೆಂಟೆಂಟ್ ಗ್ರೇಡ್-1 ಸೇರಿ ಮಂಜೂರಾದ ಸಂಖ್ಯೆ 9ರಲ್ಲಿ 5 ಭರ್ತಿ, 4 ಖಾಲಿ.

ಖಾಲಿ ಲಿಸ್ಟ್: ಸರ್ಕಾರ ಅಡುಗೆಗಾಗಿ 12 ಜನ ಮಂಜೂರು ಮಾಡಿದ್ದರೆ 12ಕ್ಕೆ 12 ಖಾಲಿ! ಲ್ಯಾಬ್ ಎಟೆಂಡರ್ 12 ಹುದ್ದೆಯೂ ಖಾಲಿ. ಎಕ್ಸ್‌ರೇ ಸಹಾಯಕ ಹುದ್ದೆ 1 ಖಾಲಿ. ಎಕ್ಸ್‌ರೇ ಅಟೆಂಡರ್ ಐವರಲ್ಲಿ ಒಬ್ಬರೂ ಇಲ್ಲ. ಆಸ್ಪತ್ರೆ ಅಟೆಂಡರ್ ಗ್ರೇಡ್-2, ಗ್ರೂಪ್ ಡಿ ನೌಕರರ ಅಲಾಟಾದ ಹುದ್ದೆ 249ರಲ್ಲಿ 66 ಭರ್ತಿಯಾದರೆ, ಹೊರಗುತ್ತಿಗೆಯಲ್ಲಿ 129 ಸಿಬ್ಬಂದಿ ಸೇರಿಸಿಕೊಂಡಿದ್ದರೂ ಕೊರತೆ ನೀಗಿಲ್ಲ. ಡಿ ದರ್ಜೆ ನೌಕರರ ಒಟ್ಟು ಮಂಜೂರಾದ ಸಂಖ್ಯೆ 273ರಲ್ಲಿ 66 ಭರ್ತಿ, 207 ಖಾಲಿ. ಸರ್ಕಾರಿ ಆಸ್ಪತ್ರೆ ಎ ದರ್ಜೆಯಲ್ಲಿ ಮಂಜೂರಾದ ಒಟ್ಟು ಸಂಖ್ಯೆ 135, ಭರ್ತಿ 117, ಖಾಲಿ 18. ಬಿ ದರ್ಜೆಯಲ್ಲಿ ಅಲಾಟ್ 9, 5 ಭರ್ತಿ, 4 ಖಾಲಿ. ಸಿ ದರ್ಜೆ ಅಲಾಟ್ 1088, ಭರ್ತಿ 525, ಖಾಲಿ 563. ಡಿ ದರ್ಜೆ ಅಲಾಟ್ 273, ಭರ್ತಿ 66, ಹೊರಗುತ್ತಿಗೆಯಲ್ಲಿ 129 ಜನರ ನೇಮಕ ಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲಾಸ್ಪತ್ರೆ ಅಂತ ಕರೆಸಿಕೊಂಡರೂ ಇದುವರೆಗೆ ಅಪ್‌ಗ್ರೇಡ್ ಆಗಿಲ್ಲ. ಹಿಂದೆ ಇದ್ದ 100 ಬೆಡ್ ಮುಂದುವರಿದಿದೆ.

ಸರ್ಕಾರ ಆರೋಗ್ಯ ವಿಷಯದಲ್ಲಿ ಎಷ್ಟು ಎಡವುತ್ತಿದೆ ಎನ್ನುವುದಕ್ಕೆ ಉಡುಪಿ ಜಿಲ್ಲೆಯಲ್ಲಿರುವ ಆಸ್ಪತ್ರೆಗಳೇ ಸಾಕ್ಷಿ. ಆಸ್ಪತ್ರೆ ಕೌಂಟರ್ ಎದುರೇ ಅದಿಲ್ಲ, ಇದಿಲ್ಲ ಎಂಬ ಬೋರ್ಡ್ ಸ್ವಾಗತಿಸುತ್ತದೆ. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಶೇ.40ರಷ್ಟು ಕೊರತೆ ಇದೆ ಎಂಬುದು ಸರ್ಕಾರದ ನಿರ್ಲಕ್ಷೃಕ್ಕೆ ಸಾಕ್ಷಿ.
-ರಾಘವೇಂದ್ರ ಭಟ್, ಭಟ್ರತೋಟ, ನಾಡಾ ಪಡುಕೋಣೆ

ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರು,ಬಿ, ಸಿ,ಡಿ ದರ್ಜೆ ಸಿಬ್ಬಂದಿ ಕೊರತೆ ಕುರಿತು ಸರ್ಕಾರದ ಗಮನ ಸೆಳೆದಿದ್ದು, ಹಂತ ಹಂತವಾಗಿ ಕೊರತೆ ನೀಗಿಸುವ ಭವರಸೆ ಸಿಕ್ಕಿದೆ. ಮುಂದಿನ ದಿನದಲ್ಲಿ ಕೊರತೆ ಹಂತ ಹಂತವಾಗಿ ನೀಗಬಹುದು ಎಂಬ ನಿರೀಕ್ಷೆಯಿದೆ.
-ಡಾ.ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…