ನಾಮಫಲಕದಲ್ಲಿ ‘ಬಾಂಗ್ಲಾದೇಶ’ಕ್ಕೆ ಖಂಡನೆ

  • ಚಾಮರಾಜನಗರ: ನಗರದ 5 ಮತ್ತು 6ನೇ ವಾರ್ಡ್‌ಗೆ ಸೇರಿದ ಗಾಳಿಪುರ ಬಡಾವಣೆಯ ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ ಬಾಂಗ್ಲಾದೇಶ ಎಂದು ಬರೆದಿರುವುದನ್ನು ಖಂಡಿಸಿ ಅಜಾದ್ ಹಿಂದು ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
  • ಜಿಲ್ಲಾಡಳಿತ ಭವನದ ಎದುರು ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
  • ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ ಬಾಂಗ್ಲಾದೇಶ ಎಂದು ಬರೆಯಲಾಗಿದೆ. ಭಾರತ ದೇಶದಲ್ಲಿದ್ದುಕೊಂಡು ಪ್ರತ್ಯೇಕತೆಯ ಕೃತ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಜರುಗುತ್ತಿದೆ ಎಂದು ಭಾವಿಸಿದ್ದೆವು. ಆದರೆ ನಗರದಲ್ಲೂ ಆರಂಭವಾಗಿದೆ ಎಂದು ದೂರಿದರು.
  • ಹತ್ತಾರು ವರ್ಷಗಳಿಂದಲೂ 5 ಮತ್ತು 6ನೇ ವಾರ್ಡ್‌ಗಳಲ್ಲಿ ಬಾಂಗ್ಲಾ ವಲಸಿಗರು ಅಕ್ರಮವಾಗಿ ನೆಲೆಸಿದ್ದಾರೆಂದು ದೂರು ನೀಡಿದ್ದರೂ ಸಹ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಇದರ ಪರಿಣಾಮ ಬಾಂಗ್ಲಾದೇಶ ಎಂಬ ನಾಮಫಲಕ ರಾರಾಜಿಸಲು ಕಾರಣವಾಗಿದೆ. ಕೂಡಲೇ ನಾಮಫಲಕ ಬದಲಾಯಿಸಿ ಆ ಬರಹ ಬರೆದವರು ಹಾಗೂ ಬರೆಯಲು ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
  • ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಅನೂಷ್ ಅವರು ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ನಂತರ ಪ್ರತಿಭಟನೆ ಸ್ಥಗಿತಗೊಂಡಿತು.
  • ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಎಂ.ಎಸ್.ಫೃಥ್ವಿರಾಜ್, ಗೌರವಾಧ್ಯಕ್ಷ ಸುಂದರ್‌ರಾಜ್, ನಗರಸಭಾ ಸದಸ್ಯ ಸಿ.ಎಂ.ಶಿವರಾಜ್, ಚಂದ್ರು, ಕೃಷ್ಣ, ಚಂದ್ರಶೇಖರ್, ರಾಜು, ಶೈಲೇಶ್, ಬಿ.ಎಸ್.ನಾಗೇಂದ್ರಸ್ವಾಮಿ, ಪ್ರಕಾಶ್, ಮಹೇಂದ್ರಕುಮಾರ್, ರಮೇಶ್, ನಾಗೇಂದ್ರ, ಕುಮಾರ್, ಪ್ರಮೋದ್, ಬಸಪ್ಪ, ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *