ತಂಗಿ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕ ಮೂಲದ ವೈದ್ಯ ಹರಿಯಾಣದಲ್ಲಿ ಮಾಡಿದ್ದನ್ನು ಕೇಳಿದ್ರೆ ಶಾಕ್‌ ಆಗ್ತೀರ!

ಚಂಡೀಗಢ: ಪಿಜಿಐಎಂಎಸ್‌ನಲ್ಲಿ ಎಂಡಿ ಕೋರ್ಸ್‌ ಮಾಡುತ್ತಿದ್ದ ಕರ್ನಾಟಕ ಮೂಲದ 30 ವರ್ಷದ ವೈದ್ಯ ತಂಗಿ ಮದುವೆಗೆ ರಜೆ ನೀಡಲು ನಿರಾಕರಿಸಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ.

ಶಿಶುವೈದ್ಯ ಶಾಸ್ತ್ರದಲ್ಲಿ ಎಂಡಿ ಅಧ್ಯಯನ ಮಾಡುತ್ತಿದ್ದ ಧಾರವಾಡದವರಾಗಿದ್ದ ಓಂಕಾರ್‌ ವಿಭಾಗದ ಮುಖ್ಯಸ್ಥರ ಕಿರುಕುಳಕ್ಕೆ ಬೇಸತ್ತು ಗುರುವಾರ ರಾತ್ರಿ ಆಸ್ಪತ್ರೆ ಆವರಣದಲ್ಲಿದ್ದ ಹಾಸ್ಟೆಲ್‌ನಲ್ಲಿ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ. ಆದರೆ, ಓಂಕಾರ್‌ ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಹೇಳುವಂತೆ ವಿಭಾಗದ ಮುಖ್ಯಸ್ಥರಿಂದ ಕಿರುಕುಳ ಉಂಟಾಗುತ್ತಿತ್ತು. ಕೆಲದಿನಗಳ ಹಿಂದೆ ತಂಗಿಯ ಮದುವೆಗೆ ತೆರಳಲು ರಜೆಯನ್ನು ನೀಡಿರಲಿಲ್ಲವಾದ್ದರಿಂದ ನೊಂದಿದ್ದರು ಎಂದು ಆರೋಪಿಸಿದ್ದಾರೆ ಎಂದು ರೊಹ್ಟಕ್‌ ಪೊಲೀಸ್‌ ಠಾಣೆ ಎಸ್‌ಎಚ್‌ಒ ಇನ್ಸ್‌ಪೆಕ್ಟರ್‌ ಕೈಲಾಶ್‌ ಚಂದೇರ್‌ ತಿಳಿಸಿದ್ದಾರೆ.

ಆರೋಪಿ ವೈದ್ಯನ ವಿರುದ್ಧ ಐಪಿಸಿ ಸೆಕ್ಷನ್‌ 306ರ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *