ಯಳಂದೂರಲ್ಲಿ ಡೆಂೆ, ವೈರಾಣು ಜ್ವರದ ಭೀತಿ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಡೆಂೆ, ವೈರಾಣು ಜ್ವರ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇತ್ತ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ, ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳಿ ಔಷಧೋಪಚಾರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಎಲ್ಲೆಲ್ಲೂ ಅನೈರ್ಮಲ್ಯ: ಪಟ್ಟಣದ ಬಳೇಪೇಟೆಯ 2, 4, 9, 10 ಹಾಗೂ 11ನೇ ವಾರ್ಡ್‌ನಲ್ಲಿ ಜ್ವರ ಪೀಡಿತರ ಸಂಖ್ಯೆ ಅತ್ಯಧಿಕವಾಗಿದೆ. ಇದರೊಂದಿಗೆ ತಾಲೂಕಿನ ಕಂದಹಳ್ಳಿ, ವೈ.ಕೆ.ಮೋಳೆ, ಯರಿಯೂರು, ಹೊನ್ನೂರು, ದುಗ್ಗಹಟ್ಟಿ, ಮೆಳ್ಳಹಳ್ಳಿ, ಉಪ್ಪಿನಮೋಳೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಬಾಧೆ ಕಾಣಿಸಿಕೊಂಡಿದೆ.
ಇಲ್ಲಿರುವ ಚರಂಡಿಯಲ್ಲಿ ನೀರು ಮಡುಗಟ್ಟಿ ನಿಂತಿದೆ. ಎಲ್ಲೆಲ್ಲೂ ಅನೈರ್ಮಲ್ಯ ತಾಂಡವವಾಡುತ್ತಿದೆ. ಈಚೆಗೆ ಸುರಿದ ಮಳೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಮನೆ ಜನರೆಲ್ಲಾ ಜ್ವರ ಬಾಧೆಯಿಂದ ಪರಿತಪಿಸುವ ಸ್ಥಿತಿ ಇದೆ. ಸಂಬಂಧಪಟ್ಟ ಗ್ರಾಮ, ಪಟ್ಟಣ ಪಂಚಾಯಿತಿಯವರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿಲ್ಲದಿರುವುದೆ ರೋಗ ಉಲ್ಭಣಗೊಳ್ಳಲು ಕಾರಣ ಎಂಬುದು ಸಾರ್ವಜನಿಕರ ದೂರು.

10ನೇ ವಾರ್ಡ್‌ನ ದಲಿತರ ಕೆಲ ಬೀದಿಗಳಲ್ಲಿ ಚರಂಡಿಯೇ ಇಲ್ಲ. ಕಲುಷಿತ ನೀರು ಮಡುಗಟ್ಟಿ ನಿಂತಿರುವುದರಿಂದ ಇದು ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಇಲ್ಲಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಗಿದೆ. ಇದರಿಂದ ಸೊಳ್ಳೆಗಳು ಸಾಯುವುದಿಲ್ಲ. ಪಕ್ಕದಲ್ಲೇ ಇರುವ ದೊಡ್ಡ ಚರಂಡಿಯ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಫಾಗಿಂಗ್ ಯಂತ್ರದ ಮೂಲಕ ಔಷಧ ಸಿಂಪಡಣೆ ಮಾಡಬೇಕು ಎಂದು ಇಲ್ಲಿನ ವಾಸಿಗಳಾದ ಮಮತಾ, ಮರಯ್ಯ, ರಾಜು ಅವರ ದೂರಾಗಿದೆ.

ಆಸ್ಪತ್ರೆಯಲ್ಲಿ ಬೆಡ್‌ಗಳೇ ಇಲ್ಲ: ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಕೇವಲ 30 ಹಾಸಿಗೆಗಳಿವೆ. ಆದರೆ, ನಿತ್ಯ ಈ ರೋಗಿಗಳ ಸಂಖ್ಯೆಯೇ ಅಧಿಕವಾಗಿರುತ್ತದೆ. ನಿತ್ಯ ಹತ್ತಾರು ಜನರ ರಕ್ತ ಪರೀಕ್ಷೆಯಲ್ಲಿ ಡೆಂೆ, ವೈರಾಣು ಜ್ವರ ಖಾತ್ರಿಯಾಗುತ್ತಿದೆ. ಆದರೆ ಇಲ್ಲಿ ಬೆಡ್‌ಗಳು ಇಲ್ಲದ ಕಾರಣ ವೈದ್ಯರೂ ಕೈಚೆಲ್ಲಿ ಕೂರುವ ಸ್ಥಿತಿ ಇದೆ. ಇದರೊಂದಿಗೆ ಇತರೆ ಶಸ್ತ್ರ ಚಿಕಿತ್ಸೆಯ ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವುದರಿಂದ ಇಂತಹ ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.

ತುರ್ತುಚಿಕಿತ್ಸಾ ವಿಭಾಗದ ಬೆಡ್‌ಗಳನ್ನೂ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಬೆಡ್ ಖಾಲಿ ಇಲ್ಲದೆ ಅನಿವಾರ್ಯವಾಗಿ ದುಬಾರಿ ಹಣ ಪಾವತಿಸಿ ಖಾಸಗಿ ಆಸ್ಪತ್ರೆಯಲ್ಲಿ ಅಥವಾ ದೂರದ ಚಾಮರಾಜನಗರ, ಕೊಳ್ಳೇಗಾಲದಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿ ಇದೆ.
ಶ್ರೀಕಂಠಸ್ವಾಮಿ, ಬಳೇಪೇಟೆ, ಡೆಂೆ ಬಾಧಿತ ರೋಗಿ

ಡೆಂೆ ದಿನೇ ದಿನೆ ಉಲ್ಭಣಿಸುತ್ತಿದೆ. ಆದರೆ ಆರೊಗ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದನ್ನು ಹತೋಟಿಗೆ ತರುವಲ್ಲಿ ಕ್ರಮ ವಹಿಸುತ್ತಿಲ್ಲ.
ಲಿಂಗರಾಜಮೂರ್ತಿ, ಯಳಂದೂರು

ಜಾಗೃತಿ ಮೂಡಿಸಲು ಕ್ರಮ
ನಾವು ಈಗಾಗಲೇ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಹರಡುವಿಕೆ. ಇದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಮೂಡಿಸುತ್ತಿದ್ದೇವೆ. ಕುಡಿಯುವ ನೀರಿನ ತೊಂಬೆಗಳನ್ನು ಶುದ್ಧಗೊಳಿಸಿ, ನೀರು ನಿಲ್ಲದಂತೆ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಅಲ್ಲದೆ ಇಲಾಖೆ ವತಿಯಿಂದ ಶೀಘ್ರ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಜ್ವರ ತಡೆಗಟ್ಟಲು ಏನು ಕ್ರಮ ವಹಿಸಬಹುದು ಎಂಬುದನ್ನು ಚರ್ಚಿಸಿ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು.
ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ

Leave a Reply

Your email address will not be published. Required fields are marked *