ಟೋಲ್ ನಿರ್ಮಾಣ ಸ್ಥಗಿತಗೊಳಿಸಲು ಆಗ್ರಹ

blank

ಹಾನಗಲ್ಲ: ತಡಸ-ಶಿವಮೊಗ್ಗ ಹೆದ್ದಾರಿಯಲ್ಲಿ ಹಾನಗಲ್ಲ ಹೊರವಲಯದಲ್ಲಿ ಟೋಲ್ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಕಾಮಗಾರಿ ಕೂಡಲೆ ಸ್ಥಗಿತಗೊಳಿಸಬೇಕು ಎಂದು ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಆಗ್ರಹಿಸಿದ್ದಾರೆ.

blank

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಡಸ-ಹಾನಗಲ್ಲ-ಶಿವಮೊಗ್ಗ ಮಾರ್ಗದ ರಾಜ್ಯ ಹೆದ್ದಾರಿ ಕಾಮಗಾರಿ ಹಾನಗಲ್ಲ ಪಟ್ಟಣದಲ್ಲಿ ಈವರೆಗೆ ಪೂರ್ಣಗೊಂಡಿಲ್ಲ. ಟೋಲ್ ಸಂಗ್ರಹ ಮಾಡುವ ಮುನ್ನ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿರಬೇಕು. ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಎಲ್ಲ ಮೂಲಸೌಕರ್ಯಗಳನ್ನು ರಸ್ತೆ ಮಧ್ಯೆ ಒದಗಿಸಿರಬೇಕು. ಇಂಥ ಯಾವುದೇ ನಿಯಮಾವಳಿ ಇದುವರೆಗೂ ಕಾಮಗಾರಿಯಡಿ ಪಾಲಿಸಿಲ್ಲ. ಕೆಆರ್​ಡಿಸಿಎಲ್ ಅವರು ಟೋಲ್ ನಿರ್ವಿುಸುವ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇದಾವುದನ್ನೂ ಪಾಲಿಸದೇ ತರಾತುರಿಯಲ್ಲಿ ಟೋಲ್ ನಿರ್ಮಾಣ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಕರೂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿಯ ಟೋಲ್ ಹಾಗೂ ಶಿಕಾರಿಪುರದಲ್ಲಿರುವ ಟೋಲ್​ಗಳ ಮಧ್ಯದಲ್ಲಿ ಮತ್ತು ಈಗ ಹಾನಗಲ್ಲಿನಲ್ಲಿ ನಿರ್ವಿುಸುತ್ತಿರುವ ಈ ಟೋಲ್ ಮಧ್ಯೆ ನಿಗದಿತ ಅಂತರ ಕಾಯ್ದುಕೊಂಡಿಲ್ಲ. ಪೂರ್ಣ ಪ್ರಮಾಣದ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಈ ಅವೈಜ್ಞಾನಿಕ ಟೋಲ್ ನಿರ್ವಣದ ಕುರಿತಂತೆ ತಾಲೂಕಿನ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರೊಂದಿಗೆ ರ್ಚಚಿಸಿ, ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank