ರಾಯಚೂರು ದೇವರಾಜು ಅರಸು ವಿಶೇಷ ವರ್ಗದಲ್ಲಿ ಬರುವ ಮನೆ ಕೆಲಸ, ವಿಧವೆ, ತರಕಾರಿ ಬೀದಿ ವ್ಯಾಪಾರಿಗಳು ಸೇರಿದಂತೆ ಇನ್ನಿತರ ವರ್ಗದವರು ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿಗಳ -Àಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ವತಿಯಿಂದ ಸೋಮವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ದೇವರಾಜು ಅರಸು ವಿಶೇಷ ವರ್ಗದವರಾದ ಮನೆಗೆಲಸ ಮಾಡುವವರು, ವಿಧವೆಯರು, ತರಕಾರಿ ಬೀದಿ ವ್ಯಾಪಾರಿಗಳು, ಅಂಗವಿಕಲರು ಮತ್ತು ಇನ್ನಿತರ ವರ್ಗದವರು, ಸ್ವಂತ ಮನೆ ಮತ್ತು ವಸತಿ ಇಲ್ಲದೆ ಬಾಡಿಗೆ ಮನೆಗಳಲ್ಲಿ ಬೀದಿ ಬದಿ ಮತ್ತು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಿವೇಶನ ಮತ್ತು ಮನೆ ಖರೀದಿ ಮಾಡಿ ಜೀವನ ಸಾಗಿಸಲು ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದಾರೆ ಎಂದರು.
ಸರ್ಕಾರ ವಿಶೇಷ ವರ್ಗದವವರೆಂದು ಗುರುತಿಸಿ ಸರಕಾರಿ ಅಥವಾ ಖಾಸಗಿ ಜಮೀನನ್ನು ಗುರುತಿಸಿ ಖರೀದಿಸಿ ನಿವೇಶನ ಮಂಜೂರಿ ಮಾಡಲು ಆದೇಶಿಸಿ ಸುಮಾರು ವರ್ಷಗಳೇ ಕಳೆದಿವೆ, ಮಹಾನಗರ ಪಾಲಿಕೆಗೆ ಸ್ವಂತ ನಿವೇಶನ ಮತ್ತು ವಸತಿ ಇಲ್ಲದ ವಿಶೇಷ ವರ್ಗದವರು ಸುಮಾರು ೧೬೦೦ ಕ್ಕೂ ಮೇಲ್ಪಟ್ಟು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯ ಅಽಕಾರಿಗಳು ಅರ್ಜಿ ಪರಿಶೀಲಿಸಿ ಜಿಲ್ಲಾಡಳಿತಕ್ಕೆ -Àಲಾನುಭವಿಗಳು ಪಟ್ಟಿ ಸಲ್ಲಿಸದೆ ನಿರ್ಲಕ್ಷ÷್ಯ ಮಾಡುತ್ತಿದ್ದಾರೆ ಎಂದು ದೂರಿದರು. ಈ ವಿಚಾರವನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸಿ ದೇವರಾಜು ಅರಸು ವಿಶೇಷ ವರ್ಗದಲ್ಲಿ ಬರುವ ಮನೆಗೆಲಸ, ವಿಧವೆಯರು, ತರಕಾರಿ, ಬೀದಿ ವ್ಯಾಪಾರಿಗಳು, ಅಂಗವಿಕಲರು ಮತ್ತು ಇನ್ನಿತರ ವರ್ಗದವರು ನಿವೇಶನಕ್ಕಾಗಿ ಸಲ್ಲಿಸಿದ ಅಜಿಗಳನ್ನು ಶೀಘ್ರದಲ್ಲಿ ಪರಿಶೀಲಿಸಿ -Àಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜನಾರ್ದನ ಹಳ್ಳಿ ಬೆಂಚಿ, ನೂರ್‌ಜಾನ್, ಬಸವರಾಜ ಹೊಸೂರು, ರಾಜಶೇಖರ, ಮಹೇಶ, ಜಿ.ರಾಜು, ಶರಣಬಸವ ರೆಡ್ಡಿ, ಜಿ.ರಾಜು, ಮಾಧವ ರೆಡ್ಡಿ, ಪವನ್, ನಿತೀನ್ ಸೇರಿದಂತೆ ಅನೇಕರು ಇದ್ದರು.