ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ರದ್ದುಗೊಳಿಸಲು ಆಗ್ರಹ

blank

ಕಮತಗಿ: ವಿದ್ಯುತ್ ದರ ಏರಿಕೆಯಿಂದ ಪ್ರತಿಯೊಬ್ಬ ನಾಗರಿಕ ಹಾಗೂ ವಿದ್ಯುತ್ ಮಗ್ಗ ನಂಬಿ ಬದುಕು ಕಟ್ಟಿಕೊಂಡಿರುವ ನೇಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದರ ಏರಿಕೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕಮತಗಿ ಪಟ್ಟಣದ ನೇಕಾರ ವೇದಿಕೆ ವತಿಯಿಂದ ಪಟ್ಟಣ ಪಂಚಾಯಿತಿ ಅಧಿಕಾರಿ ಹಾಗೂ ಹೆಸ್ಕಾಂ ಕಚೇರಿಗೆ ಮಂಗಳವಾರ ಮನವಿ ನೀಡಲಾಯಿತು.
ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ನೇಕಾರರು ಹೆಸ್ಕಾಂ ಅಧಿಕಾರಿಗೆ ಮನವಿ ಪತ್ರ ನೀಡಿ ಮಾತನಾಡಿ, ಜೂನ್ ತಿಂಗಳಿನಿಂದ ವಿದ್ಯುತ್ ಮಗ್ಗದ ತ್ರೀ ೇಸ್ ಲೈನ್ ಹಾಗೂ ಮನೆಗಳ ವಿದ್ಯುತ್ ಬಿಲ್‌ನ್ನು ಏಕಾ ಏಕಿ ಮೂರುಪಟ್ಟು ಹೆಚ್ಚಿಗೆ ಮಾಡಿರುವುದರಿಂದ ಮಗ್ಗಗಳನ್ನೇ ನಂಬಿ ಜೀವನ ಮಾಡುತ್ತಿರುವ ರಾಜ್ಯದ ಲಕ್ಷಾಂತರ ನೇಕಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಈ ಮೊದಲು ಪ್ರತಿ ಎಚ್‌ಪಿಗೆ ನಿಗದಿತ ಶುಲ್ಕ 80ರೂ. ಇದ್ದದ್ದನ್ನು 140ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಹೊರೆಯಾಗಲಿದೆ. ಲಾಕ್‌ಡೌನ್ ನಂತರ ನೇಕಾರ ಉದ್ಯಮ ನಷ್ಟದ ಹಾದಿ ಹಿಡಿದಿದ್ದು, ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ನೇಕಾರಿಕೆ ಮುಚ್ಚುವ ಸ್ಥಿತಿ ಬಂದು ತಲುಪಿದೆ. ಆದ್ದರಿಂದ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದನ್ನು ತಕ್ಷಣ ವಾಪಸ್ ಪಡೆದುಕೊಂಡು ಮೊದಲಿನ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.
ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಎಲ್ಲ ನೇಕಾರರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಪಕ್ಷ ಅಧಿಕಾರಕ್ಕೆ ಬಂದಿದ್ದು, ಉಚಿತ ವಿದ್ಯುತ್ ಪೂರೈಸುವವರೆಗೆ ಯಾವುದೇ ಕಾರಣಕ್ಕೂ ಬಿಲ್ ತುಂಬುವುದಿಲ್ಲ ಎಂದರು.
ಪಟ್ಟಣದಲ್ಲಿ ಪದೇ ಪದೇ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ ವಿದ್ಯುತ್ ಚಾಲಿತ ಮಗ್ಗ, ಗಿರಣಿ, ಮತ್ತು ಇತರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಚಾಲಿತ ಮಗ್ಗಗಳಿಗೆ ಪ್ರತ್ಯೇಕ ಟಿಸಿ ಅಳವಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ನಂತರ ಹೆಸ್ಕಾಂ ಕಚೇರಿ ಮೇಲ್ವಿಚಾರಕ ಎಂ.ಎಸ್. ಪೂಜಾರಿ ನೇಕಾರರ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯುತ್ ಬಿಲ್ ಹೆಚ್ಚಳವಾಗಿರುವುದನ್ನು ಕಡಿಮೆಗೊಳಿಸುವುದರ ಬಗ್ಗೆ ಹಾಗೂ ವಿದ್ಯುತ್ ಮಗ್ಗಗಳಿಗೆ ಪ್ರತ್ಯೇಕ ಟಿಸಿ ಅಳವಡಿಸುವುದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವೆ ಎಂದರು.
ಎನ್. ಜಿ. ಕಂದಗಲ್, ಬಿ.ಎಲ್.ಹೋಟಿ, ರಾಮಕೃಷ್ಣಪ್ಪ ಬಟ್ಟೂರ, ಶ್ರೀನಿವಾಸ ಸಂದರಕಿ, ನಾಗೇಶ ಜಯ್ಯ, ಕಾಶಿನಾಥ ತಂಬುರಿ, ನೇಕಾರ ವೇದಿಕೆ ಸದಸ್ಯರು ಹಾಗೂ ಗ್ರಾಹಕರು ಇದ್ದರು.

Share This Article

ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water

hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.  ವಯಸ್ಕರು…

ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips

Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …

ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!

sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು  ಸಹಜ.  ಈ ರೀತಿಯ ನಿದ್ರೆ ಬರುವುದರಿಂದ,…