ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಆಗ್ರಹ

1 Min Read
ex minister kota srinivas poojari visit chandrashekaran home
ಶಿವಮೊಗ್ಗ ಕೆಂಚಪ್ಪ ಲೇಔಟ್‌ನ ಚಂದ್ರಶೇಖರನ್ ಮನೆಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಇದ್ದರು.

ಶಿವಮೊಗ್ಗ: ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಚಂದ್ರಶೇಖರನ್ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತದೆ. ಬರಗಾಲದಲ್ಲಿ ಹಣ ಬಿಡುಗಡೆ ಆಗುವುದೇ ಕಷ್ಟ. ಆದರೆ 187 ಕೋಟಿ ರೂ. ಬಿಡುಗಡೆಯಾಗಿದ್ದು ಅದರಲ್ಲಿ 85 ಕೋಟಿ ರೂ. ಅವ್ಯವಹಾರ ನಡೆದಿದೆ. ಸರ್ಕಾರ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಅಮಾನತ್ತು ಮಾಡಿ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗೆ ವಹಿಸಿದರೆ ನ್ಯಾಯ ಸಿಗುವುದಿಲ್ಲ. ಹಾಗಾಗಿ ತನಿಖೆಯನ್ನೇ ಸಿಬಿಐ ಅಥವಾ ನಿವೃತ್ತ ನಾಯಾಧೀಶರಿಗೆ ವಹಿಸಬೇಕು. ಪೆನ್‌ಡ್ರೈವ್ ಸಿಕ್ಕಿದ್ದು ಅದರಲ್ಲಿ ಏನಿದೆ ಎಂದು ಸ್ಪಷ್ಟಪಡಿಸಿ ನಂತರ ವಶಕ್ತೆ ಪಡೆಯಬೇಕಿತ್ತು. ಅದು ಆಗಿಲ್ಲ ಎಂದರು.

See also  ಹಣೆಯಲ್ಲಿ ಗುಳ್ಳೆಗಳಾದರೆ ಚಿಂತಿಸಬೇಡಿ, ಈ ಸಿಂಪಲ್​ ಟಿಪ್ಸ್ ಫಾಲೋ ಮಾಡಿ!
Share This Article