ಬೇಡಿಕೆ ಈಡೇರಿಕೆಗೆ ಬೃಹತ್ ಪ್ರತಿಭಟನೆ ನಾಳೆ

blank

ದೇವದುರ್ಗ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನ.11ರಂದು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಹೇಳಿದರು.

ಇದನ್ನೂ ಓದಿ:

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಜಿಲ್ಲೆಯ ಎಲ್ಲ ಎಪಿಎಂಸಿಗಳಲ್ಲಿ ರೈತರನ್ನು ದಲ್ಲಾಳಿಗಳು ಹಾಗೂ ಖರೀದಿದಾರರು ಸುಲಿಗೆ ಮಾಡುತ್ತಿದ್ದಾರೆ. ಯಾವುದೇ ಧಾನ್ಯ ಮಾರಾಟ ಮಾಡಲು ಹೋದರೆ, ಸ್ಯಾಂಪಲ್ ಹೆಸರಿನಲ್ಲಿ 1-2ಕೆಜಿ ಧಾನ್ಯ ತೆಗೆದುಕೊಳ್ಳುತ್ತಾರೆ. ಒಬ್ಬ ರೈತನಿಂದ 8-10 ಖರೀದಿದಾರರು 1ರಿಂದ 2ಕೆಜಿ ಸ್ಯಾಂಪಲ್ ತೆಗೆದುಕೊಂಡು ಹೋಗುತ್ತಾರೆ. ಇದರಿಂದ 10-15ಕೆಜಿ ಧಾನ್ಯ ನಷ್ಟವಾಗುತ್ತೆ. ಸ್ಯಾಂಪಲ್‌ಗೆ 250ಗ್ರಾಂ ಧಾನ್ಯ ತೆಗೆದುಕೊಳ್ಳುವ ಪದ್ಧತಿ ಜಾರಿಮಾಡಬೇಕು.

ಹತ್ತಿ, ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇದೇ ಪದ್ಧತಿಯಿದ್ದು ರದ್ದುಮಾಡಬೇಕು ಎಂದು ಆಗ್ರಹಿಸಿದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅವ್ಯವಹಾರ ನಡೆದಿದ್ದು, ಬೆಳೆಹಾನಿಯಾಗಿದ್ದರೂ ಪರಿಹಾರ ನೀಡುತ್ತಿಲ್ಲ. ಜಿಲ್ಲೆಯ ಸಾವಿರಾರು ರೈತರು ಬೆಳೆವಿಮೆ ತುಂಬಿದ್ದಾರೆ. ವಿಮೆ ತುಂಬಿದ ರೈತರು ಸಂಘ ಸಂಪರ್ಕ ಮಾಡಿದರೆ ಪರಿಹಾರ ಕೊಡಿಸುತ್ತೇವೆ. ರೈತರ ಪಹಣಿ, ಬೆಳೆವಿಮೆ ತುಂಬಿದ ರಸೀದಿ, ಬ್ಯಾಂಕ್ ಪಾಸ್‌ಬುಕ್ ನೀಡಬೇಕು.

ಫಸಲ್ ಬಿಮಾ ಯೋಜನೆಯಡಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಅಧಿಕಾರಿಗಳು ಹಾಗೂ ವಿಮಾ ಕಂಪನಿ ಮಾಲೀಕರು ಶಾಮೀಲು ಆಗಿದ್ದಾರೆ. ಕೇಸ್‌ದಾಖಲಾಗಿದ್ದರೂ ಕ್ರಮಕೈಗೊಂಡಿಲ್ಲ.

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡರೂ ಸರ್ಕಾರ ರೈತರಿಗೆ ಬೆಳೆಪರಿಹಾರ ನೀಡುತ್ತಿಲ್ಲ. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ರೈತರ ಜಮೀನಿಗೆ ಹೋಗಿ ಸರ್ವೇ ಮಾಡದೇ ಕಚೇರಿಯಲ್ಲೇ ಕುಳಿತು ಅರೆಬರೆ ವರದಿ ನೀಡುತ್ತಾರೆ.

ಸರ್ಕಾರ ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಬಿಡುಗಡೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಭಾಕರ ಪಾಟೀಲ್ ಇಂಗಳದಾಳ ಹೇಳಿದರು. ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಜಿಲ್ಲಾ ಉಪಾಧ್ಯಕ್ಷ ಹನುಮಗೌಡ, ತಿಮ್ಮಣ್ಣ, ಸೋಮಪ್ಪ ಇದ್ದರು.

ಅಪರಿಚಿತರಿಗೆ ಕೊಡಬೇಡಿ
ಮೆಣಸಿನಕಾಯಿ, ಹತ್ತಿ, ತೊಗರಿ, ಭತ್ತ ಸೇರಿ ವಿವಿಧ ಬೆಳೆಗಳ ರಾಶಿ ಹಾಗೂ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ ರೈತರು ಯಾವುದೇ ಅಪರಿಚಿತ ವ್ಯಾಪಾರಿಗಳು, ದಲ್ಲಾಳಿಗಳು ಹಾಗೂ ಬೇರೆ ಜಿಲ್ಲೆಯ ಖರೀದಿದಾರರಿಗೆ ಧಾನ್ಯ ಮಾರಾಟ ಮಾಡಬಾರದು. ರೈತರ ಮಾಲು ಖರೀದಿ ಮಾಡಿದ ನಂತರ ಹಣ ಕೊಡದೆ ವಂಚನೆ ಮಾಡುವ ಜಾಲ ಹೆಚ್ಚಾಗಿದೆ. ಹೀಗಾಗಿ ರೈತರು ಯಾವುದೇ ಮಾಲು ಅಪರಿಚಿತರಿಗೆ ಮಾರಾಟ ಮಾಡಬಾರದು. ಅಧಿಕೃತ ಮಳಿಗೆ, ಎಪಿಎಂಸಿಯಲ್ಲಿ ಮಾರಾಟ ಮಾಡುವಂತೆ ಮನವಿ ಮಾಡಿದರು.

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…