More

    ಅವೈಜ್ಞಾನಿಕ ಆದೇಶ ಹಿಂಪಡೆಯುವಂತೆ ಆಗ್ರಹ

    ಮದ್ದೂರು: ಮಕ್ಕಳನ್ನು ಒಂದನೇ ತರಗತಿಗೆ ಪ್ರವೇಶಾತಿ ಮಾಡಲು ಇರುವ ಜೂ.1ಕ್ಕೆ 6 ವರ್ಷವಾಗಿರಬೇಕು ಎಂಬ ನಿಯಮವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಬೆಸಗರಹಳ್ಳಿ ಗ್ರಾಪಂ ಸದಸ್ಯ ಬಾಬು ಎಂ.ಆರ್.ಕಾಳೇಗೌಡ ಒತ್ತಾಯಿಸಿದ್ದಾರೆ.

    ಜೂ.1ಕ್ಕೆ 6 ವರ್ಷ ತುಂಬುವ ಮಕ್ಕಳನ್ನು 1ನೇ ತರಗತಿಗೆ ಪ್ರವೇಶಾತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಒಂದು ದಿನವೂ ಕಡಿಮೆಯಾದರೆ ಅಂಥ ಮಕ್ಕಳಿಗೆ ಪ್ರವೇಶ ನೀಡಲು ಶಿಕ್ಷಣ ಸಂಸ್ಥೆಗಳು ನಿರಾಕರಿಸುತ್ತಿವೆ. ಸರ್ಕಾರದ ಆದೇಶ ಅವೈಜ್ಞಾನಿಕವಾಗಿದ್ದು, 6 ವರ್ಷಕ್ಕೆ ಒಂದು ದಿನ ಕಡಿಮೆಯಾದರೆ ಪ್ರವೇಶಾತಿ ನಿರಾಕರಿಸುತ್ತಿರುವುದರಿಂದ 5 ವರ್ಷದ ತುಂಬಿದ ಮಕ್ಕಳಿಗೆ ಶೈಕ್ಷಣಿಕವಾಗಿ ನಷ್ಟವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

    ಒಂದು ದಿನ ಕಡಿಮೆಯಾದರೂ ಪ್ರವೇಶ ಪಡೆಯಲಾಗದ ಮಕ್ಕಳು 1 ವರ್ಷ ಕಾದು ನಂತರ ಪ್ರವೇಶಾತಿ ಪಡೆಯುವ ಸಂಕಷ್ಟ ಎದುರಾಗಿದೆ. ಸರ್ಕಾರ ತಕ್ಷಣ ಈ ಅವೈಜ್ಞಾನಿಕ ಆದೇಶವನ್ನು ಹಿಂಪಡೆದು ಮಕ್ಕಳಿಗೆ ಅನುಕೂಲ ಕಲ್ಪಿಸಬೇಕಿದೆ. ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್, ಎಂಲ್ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಹಾಗೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವವರು ಸರ್ಕಾರದ ಮೇಲೆ ಒತ್ತಡ ಹಾಕಿ ಮಕ್ಕಳ ಹಿತದೃಷ್ಟಿಯಿಂದ ಈ ಆದೇಶವನ್ನು ರದ್ದು ಮಾಡಿ ರಾಜ್ಯದ ಲಕ್ಷಾಂತರ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts