ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಲಕಮನಹಳ್ಳಿಯ ಶಿವಾಜಿನಗರದಲ್ಲಿ ಬೀದಿ ದಿಪಗಳು ಇಲ್ಲದೆ ರಾತ್ರಿಯಲ್ಲಿ ಕತ್ತಲಲ್ಲೇ ಓಡಾಡುವಂತಾಗಿದೆ. ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜನರು ದೂರಿದ್ದಾರೆ.
ಶಿವಾಜಿನಗರದಲ್ಲಿನ ಒಂದು ರಸ್ತೆಗೂ ದೀಪ ಅಳವಡಿಕೆ ಮಾಡಿಲ್ಲ. ಹೀಗಾಗಿ ಜನರು ಕತ್ತಲಿನಲ್ಲೇ ಓಡಾಡುವಂತಾಗಿದೆ. ಈಗಾಗಲೇ ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲಿ ಹಗಲಿನಲ್ಲೇ ಓಡಾಡುವುದು ಕಷ್ಟ. ಇಂತಹ ಸ್ಥಿಯಲ್ಲಿ ರಾತ್ರಿಯಂತೂ ಹೇಳ ತೀರದು. ಬಹುತೇಕ ಜನರು ರಾತ್ರಿ ಸಮಯದಲ್ಲಿ ಬಿದ್ದು ಗಾಯ ಸಹ ಮಾಡಿಕೊಂಡಿದ್ದಾರೆ.
ಬಡಾವಣೆಯಲ್ಲಿ ಬೀದಿ ದೀಪ ಅಳವಡಿಕೆ ಜತೆಗೆ ರಸ್ತೆಗಳ ದುರಸ್ತಿ, ಗಟಾರು ನಿರ್ಮಾಣ ಮಾಡುವಂತೆ ಪಾಲಿಕೆ ಸದಸ್ಯರು ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟೆಂಡರ್ ಕರೆಯಲಾಗಿದೆ. ಕೂಡಲೇ ಅಳವಡಿಕೆ ಮಾಡಲಾಗುವುದು ಎಂದು ಹೇಳುತ್ತೇಲೆ ವರ್ಷಗಟ್ಟಲೇ ಕಾಲ ಹರಣ ಮಾಡಿದ್ದಾರೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಡಾವಣೆ ನಿವಾಸಿ ರಂಗನಾಥ ಜೋಶಿ ಆಗ್ರಹಿಸಿದ್ದಾರೆ.
ಬೀದಿ ದೀಪಗಳ ಅಳವಡಿಕೆಗೆ ಆಗ್ರಹ

You Might Also Like
ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health
Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…
ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್? ಇಲ್ಲಿದೆ ನೋಡಿ ಉತ್ತರ | Summer
Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…
ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging
hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…