More

  ಕಪ್ಪೆ ಖಾದ್ಯಕ್ಕೆ ಸಖತ್ ಡಿಮ್ಯಾಂಡ್; ಯಮ್ಮಿ ಯಮ್ಮಿ ಜಂಪಿಂಗ್ ಚಿಕನ್​​ಗಾಗಿ ಕಾರವಾರ, ಭಟ್ಕಳದಿಂದ ಅಕ್ರಮ ಸಾಗಾಟ

  ಬೆಂಗಳೂರು: ನೆರೆಯ ಗೋವಾದಲ್ಲಿ ಕಪ್ಪೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.  ಕಪ್ಪೆಗಳನ್ನು ಹಿಡಿಯದಂತೆ ಕಠಿಣ ಕಾನೂನು ಕ್ರಮ ಜಾರಿಯಲ್ಲಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದ್ದು, ಕರ್ನಾಟಕದ ಗಡಿ ಭಾಗದಲ್ಲಿರುವ ಕಾರವಾರದಿಂದ ಭಟ್ಕಳದವರೆಗಿನ ಪ್ರಾಂತ್ಯಗಳಲ್ಲಿ, ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲಗಳ ಅಕ್ರಮವಾಗಿ ಕಾರ್ಯನಿರ್ವಸಲು ಆರಂಭಿಸಿವೆ.

  ಮಳೆಗಾಲದಲ್ಲಿ ಸಿಗುವ ಕಪ್ಪೆಗಳ ಖಾದ್ಯ ಇಲ್ಲಿ ಡಿಲೀಶಿಯಸ್ ಫುಡ್ ಕೂಡ ಹೌದು. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆ ಕಾರವಾರದಲ್ಲಿ ಕಪ್ಪೆಗಳನ್ನ ಹಿಡಿದು ಗೋವಾಕ್ಕೆ ಸಾಗಿಸುವ ಜಾಲ ಆಕ್ಟೀವ್ ಆಗಿದೆ. ಕಳೆದ ಹಲವು ವರ್ಷಗಳಿಂದ ಈ ಜಾಲ ಕಪ್ಪೆ ಸಾಗಾಟ ಮಾಡುತ್ತಲೇ ಬರುತ್ತಿದೆ. ಈ ಬಾರಿ ಸಹ ಸಾಗಾಟ ಮಾಡುವಾಗ ಅರಣ್ಯ ಇಲಾಖೆಯ ಕೈಗೆ ಸಿಕ್ಕಿಬಿದ್ದಿದೆ. ಕಾರವಾರದ ಕಾಳಿ ನದಿ ಸೇತುವೆ ಬಳಿ ಗೋವಾಕ್ಕೆ ಸಾಗುತ್ತಿದ್ದ ಬಸ್ಸಿನಲ್ಲಿ ಕಪ್ಪೆ ಸಾಗಾಟ ಮಾಡುವಾಗ ಅರಣ್ಯ ಇಲಾಖೆಯವರು ಹಿಡಿದು ರಕ್ಷಣೆ ಮಾಡಿದ್ದು, ಚಾಲಕ ಹಾಗೂ ನಿರ್ವಾಹಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  ಮಾಂಸಕ್ಕಾಗಿ ಕಪ್ಪೆಗಳನ್ನು ಸಾಯಿಸುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುವ ಆತಂಕ ಎದುರಾಗಿದೆ. ಕಪ್ಪೆಗಳ ನಿರಂತರ ಮಾರಣ ಹೋಮದಿಂದಾಗಿ ಅವುಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಜೀವ ವೈವಿಧ್ಯತೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ. ಇವುಗಳನ್ನು ಆಹಾರವನ್ನಾಗಿ ಬಳಸುವ ಇತರೆ ಜೀವಿಗಳು ಆಹಾರಕ್ಕಾಗಿ ಪರದಾಡುವ ಆತಂಕ ಎದುರಾಗಿದ್ದು, ಕಾನೂನಿಗೆ ವಿರುದ್ಧವಾಗಿ ಕಪ್ಪೆಗಳನ್ನು ಮಾಂಸಕ್ಕಾಗಿ ಬಳಕೆ ಮಾಡುವುದನ್ನು ತಡೆಯಬೇಕು ಎನ್ನುವುದು ಪರಿಸರ ಪ್ರೇಮಿಗಳು ಒತ್ತಾಯವಾಗಿದೆ.

  ಸಾಮಾನ್ಯವಾಗಿ ಗೋವಾಕ್ಕೆ ತೆರಳುವ ಎಲ್ಲಾ ಪ್ರವಾಸಿಗರಿಗೆ ಈ ಕಪ್ಪೆ ಮಾಂಸದ ಬಾಡೂಟ ಸಿಗುವುದಿಲ್ಲ. ಹಾಗೇನಾದರೂ ಹೋಗಿ ‘ಫ್ರಾಗ್ ಡಿಶ್’ ಕೇಳಿದರೆ ಯಾವ ಹೋಟೆಲ್- ರೆಸ್ಟೋರೆಂಟ್‌ನವರೂ ಕೊಡುವುದಿಲ್ಲ ಕೂಡ. ಒಂದುವೇಳೆ ಹಾಗೆ ಓಪನ್ನಾಗಿ ಕೊಟ್ಟರೆ ಅರಣ್ಯಾಧಿಕಾರಿಗಳಿಗೆ ಎಲ್ಲಿ ಸಿಕ್ಕಿಬೀಳುತ್ತೀವೋ ಎಂಬ ಭಯ ಕೂಡ ಗೋವನ್ನರಲ್ಲಿದೆ. ಅದಕ್ಕಾಗಿ ಇಲ್ಲಿ ಕೋಡ್ ವರ್ಡ್ ಬಳಕೆ ಮಾಡಲಾಗುತ್ತದಂತೆ. ಅಂದ್ರೆ, ‘ಜಂಪಿಂಗ್ ಚಿಕನ್ ಡಿಶ್’ ಎಂದು ಕೇಳಿದರೆ ಮಾತ್ರ ಇಲ್ಲಿ ಕಪ್ಪೆಯ ಮಾಂಸದ ಖಾದ್ಯಗಳನ್ನ ಕೊಡ್ತಾರಂತೆ.

  ಸೋನಾಲಿ ಬೇಂದ್ರೆಗಾಗಿ ಕೆರೆಗೆ ಹಾರಿ ಪ್ರಾಣ ಬಿಟ್ಟ..’ಪ್ರೀತ್ಸೆ’ ನಟಿಗೆ ಕಾಡ್ತಿದೆ ಈತನ ನೆನಪು

  See also  ಎಂಟು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಕರೊನಾ ಡ್ರಗ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts