ಹುಳಿಯಾರು: ರಾಷ್ಟ್ರೀಯ ಹೆದ್ದಾರಿ-234 ರಸ್ತೆ ಕಾಮಗಾರಿ ಮತ್ತು ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದನ್ನು ಖಂಡಿಸಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ರಾಮ್‌ಗೋಪಾಲ್ ವೃತ್ತದಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿ, ಎನ್‌ಎಚ್‌ಎಐ ಇಂಜಿನಿಯರ್ ಬರುವವರೆಗೂ ವಾಹನಗಳ ಸಂಚಾರಕ್ಕೆ ಅವಕಾಶ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್‌ಗಳಾದ ಸುಧಾಕರ್ ಮತ್ತು ಮೋಹನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದಾಗ, ರಸ್ತೆಯಲ್ಲಿ ಮನುಷ್ಯರು ವಾಹನಗಳು ಓಡಾಡುವ ಸ್ಥಿತಿ ಇದೆಯಾ?, ಅಪೂರ್ಣ ಕಾಮಗಾರಿಯಿಂದ ಕೊಳಚೆ ನೀರ್ಲೆ ರಸ್ತೆ ಮೇಲೆ ಹರಿಯುತ್ತಿದೆ. ವಾಹನಗಳು ವೇಗವಾಗಿ ಹೋದಾಗ ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಬೀಳುತ್ತಿದೆ ಎಂದು ಅಧಿಕಾರಿಗಳನ್ನು ಕಿರಣ್ ಕುಮಾರ್ ತರಾಟೆ ತೆಗೆದುಕೊಂಡರು.
ಕೊಳಚೆ ನೀರು ನೆಲಮಹಡಿ ಅಂಗಡಿ ಮಳಿಗೆಗಳಿಗೆ ಬಸಿದು ಲಕ್ಷಾಂತರ ರೂ.ಸಾಮಗ್ರಿ ಹಾಳಾಗಿವೆ. ಕೆಲವು ಮಾಲೀಕರು ಅಂಗಡಿಯ ಬೀಗ ಹಾಕಿದ್ದಾರೆ. ಇಷ್ಟಾದರೂ ಇಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಪರೋಕ್ಷವಾಗಿ ಸಚಿವರಿಗೆ ಟಾಂಗ್ ನೀಡಿದರು.
ಈ ವೇಳೆ ಇಂಜಿನಿಯರ್ ಸುಧಾಕರ್ ಕಾಮಗಾರಿಗೆ ಕೋರ್ಟ್ ತಡೆ ನೀಡಿದೆ ಎಂದಾಗ,
ಸಾರ್ವಜನಿಕರು ಮೊದಲು ಗ್ರಾಪಂ ಇತ್ತು. ಆಗ ರಸ್ತೆ ಮಧ್ಯದಿಂದ 18 ಮೀಟರ್ ಎಂದಾಗ ಸಾರ್ವಜನಿಕರು ಮನೆಮಠ ಕಳೆದುಕೊಳ್ಳುವ ಭೀತಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ತಡೆಯಾಜ್ಞೆ ತಂದಿದೆ ಎಂಬುದಾದರೆ ಅದರ ಒಂದು ಪ್ರತಿನಮಗೆ ಕೊಡಿ ಎಂದು ಜನರು ಒತ್ತಾಯಿಸಿದರು. ಮುಖಂಡಾರಾದ ನಾಗೇಂದ್ರಪ್ಪ, ಶಶಿಕುಮಾರ್, ವಿಶ್ವನಾಥ್, ಬಾಲಾಜಿ ಸಿಂಗ್, ದೇವರಾಜ್. ಚಂದ್ರಣ್ಣ, ಯತೀಶ್ ಇದ್ದರು.