ಯರಗಟ್ಟಿ: ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲು ಅಧಿಕಾರಿ, ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಶನಿವಾರ ಪಪಂ ಮುಂಭಾಗದಲ್ಲಿ ರೆಡ್ಡಿ ಸಮುದಾಯದ ಜನ ಅಹೋರಾತ್ರಿ ಧರಣಿ ನಡೆಸಿದ ಟನೆ ನಡೆಯಿತು. ಸರ್ಕಾರದ ಎಲ್ಲ ಕಚೇರಿ, ಶಾಲಾ&ಕಾಲೇಜುಗಳಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಮಾಡುವಂತೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿದೆ. ಆದರೆ, ಯರಗಟ್ಟಿ ಪಪಂ ಅಧಿಕಾರಿ, ಸಿಬ್ಬಂದಿ ಉದ್ದೇಶಪೂರ್ವಕವಾಗಿ ಜಯಂತಿ ಆಚರಣೆ ಮಾಡಿಲ್ಲ. ಈ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು. ಪ.ಪಂ ನಾಮ ನಿರ್ದೇಶನ ಸದಸ್ಯ ನಿಖಿಲ ಪಾಟೀಲ, ವೆಂಕಟೇಶ ದೇವರಡ್ಡಿ, ವಿಶಾಲಗೌಡ ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಗಿರೀಶ ಪಾಟೀಲ, ಗೋವಿಂದ ದೇವರಡ್ಡಿ, ನಾರಾಯಣ ಪಾಟೀಲ, ಸದಾನಂದ ಪಾಟೀಲ, ರಮೇಶ ಪಾಟೀಲ, ಕಿಟ್ಟು ತೊರಗಲ್, ಸಂತೋಷ ದೇವರಡ್ಡಿ, ಗಿರೀಶ ದೇವರಡ್ಡಿ ಇತರರಿದ್ದರು.
