ಕಾರವಾರ: ಎಂಜಲು ಉಗುಳಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಸದಸ್ಯರು ಎಸಿ ಕನಿಷ್ಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕಾರವಾರ ಅತ್ಯಂತ ಶಾಂತ ಸ್ಥಳವಾಗಿದೆ. ಎಲ್ಲ ಧರ್ಮದವರು ಇಲ್ಲಿ ಸೌಹಾರ್ದದಿಂದ ಇದ್ದಾರೆ. ಆದರೆ, ಸಂತೆ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮಾಡಿದ ಕುಕೃತ್ಯದ ವಿಡಿಯೋ ವೈರಲ್ ಆಗಿದ್ದು, ವ್ಯಾಪಾರಿಯನ್ನು ಬಂಽಸಲಾಗಿದೆ ಎಂಬ ಮಾಹಿತಿ ಇದೆ. ಆ ವ್ಯಾಪಾರಿ ವಿರುದ್ಧ ತಕ್ಕ ಕಾನೂನು ಕ್ರಮ ವಹಿಸಬೇಕು ಮತ್ತು ಇನ್ನು ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹೊರ ಊರುಗಳಿಂದ ಕಾರವಾರಕ್ಕೆ ಪ್ರತಿ ಭಾನುವಾರ, ಹಾಗೂ ದೀಪಾವಳಿ, ನವರಾತ್ರಿಯ ಸಂದರ್ಭದಲ್ಲಿ ಹೊರ ಊರುಗಳಿಂದ ಸಾವಿರಾರು ವ್ಯಾಪಾರಸ್ಥರು ಬರುತ್ತಾರೆ. ವ್ಯಾಪಾರ ಮಾಡಿಕೊಂಡು ಹೋಗುವವರ ಬಗ್ಗೆ ನಮ್ಮ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೇದಿಕೆಯ ಡಾ.ಗಜೇಂದ್ರ ನಾಯ್ಕ, ಚಂದ್ರಕಾAತ ಹರಿಕಂತ್ರ, ಹರೀಶ ಬಾಡಕರ್, ದೀಪಕ್ ನಾಯಕ್, ಶರದ್ ಬಾಂದೇಕರ್ ಇತರರು ಇದ್ದರು.
Airport ಗಾಗಿ ಅಂಕೋಲಾದಲ್ಲಿ 1 ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ