More

    25000 ಸಾವಿರ ರೂಪಾಯಿಗೆ ಶಿಷ್ಯವೇತನ ಹೆಚ್ಚಿಸುವಂತೆ ವಿದ್ಯಾರ್ಥಿಗಳ ಆಗ್ರಹ

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಹೆಚ್ಚಿಸಬೇಕೆಂದು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆಗ್ರಹಿಸಿದೆ.

    ವಿವಿಯಲ್ಲಿ ಪಿಎಚ್.ಡಿಗೆ ನೋಂದಾಯಿಸಿಕೊಂಡು ಸಂಶೋಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೊದಲು ನೀಡುತ್ತಿದ್ದ ಶಿಷ್ಯವೇತನಕ್ಕಿಂತ ಕಡಿಮೆ ವೇತನ ನೀಡಲು ವಿವಿ ನಿರ್ಧರಿಸಿದೆ. ಇದು ತಪ್ಪು ಮಾಸಿಕ ಕನಿಷ್ಠ 25 ಸಾವಿರ ರೂ.ನೀಡಬೇಕೆಂದು ಸಂಶೋಧನಾ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಬೆಂ.ವಿವಿಯಲ್ಲಿ ಈ ಹಿಂದೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 22 ಸಾವಿರ ರೂ.ಶಿಷ್ಯವೇತನವನ್ನು ನೀಡುತ್ತಾ ಬಂದಿದೆ. ಇದೀಗ ಹೊಸದಾಗಿ ಪ್ರವೇಶ ಪಡೆದು ವಿದ್ಯಾರ್ಥಿಗಳಿಗೆ ಕೇವಲ 10 ಸಾವಿರ ರೂ.ನೀಡಲು ನಿರ್ಧರಿಸಿದೆ. ಇದು ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿ ಮಾಡುತ್ತಿರುವ ಅನ್ಯಾಯವಾಗಿದೆ.

    ಇದನ್ನು ಓದಿ: ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

    ಸಮಾಜ ಕಲ್ಯಾಣ ಇಲಾಖೆಯೇ ಗಿರಿಜನ ಉಪ ಯೋಜನೆ ಅಡಿ ಸಮಾಜ ಕಲ್ಯಾಣ ಇಲಾಖೆಯೇ 10 ಸಾವಿರ ರೂ.ೋಷಣೆ ಮಾಡಿದೆ. ವಿವಿಯು 12 ಸಾವಿರೂ.ಹೆಚ್ಚುವರಿಯಾಗಿ ಸೇರಿಸಿ ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ 22 ಸಾವಿರ ರೂ.ನೀಡುತ್ತಿದೆ. ಹೊಸದಾಗಿ ಪ್ರವೇಶ ಪಡೆದವರಿಗೆ ಮಾತ್ರ 10 ಸಾವಿರ ರೂ.ನೀಡುವುದು ಎಷ್ಟು ಸರಿ? ವಿವಿಯು ಹಳೇ ಮಾದರಿಯಲ್ಲಿ 22 ಸಾವಿರ ರೂ.ನೀಡಬೇಕು. ಇಲ್ಲವೆ, 25 ಸಾವಿರ ನಿಗದಿ ಪಡಿಸಬೇಕೆಂದು ಸಂಶೋಧನಾ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಎಲ್ಲಿ ಎಷ್ಟು?: ಮೈಸೂರು ವಿಶ್ವವಿದ್ಯಾಲಯ ಪ.ಜಾ ಮತ್ತು ಪ.ಪಂ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ರೂ.ನೀಡುತ್ತಿದೆ. ಕಲಬುರಗಿಯ ವಿವಿಯು 18 ಸಾವಿರ ರೂ, ದಾವಣಗೆರೆ ವಿವಿ 19 ಸಾವಿರ ರೂ. ನೀಡುತ್ತಾ ಬಂದಿದೆ. ಇನ್ನೂ ಹೊರ ರಾಜ್ಯದಲ್ಲಿ ಮಾಸಿಕ 35 ಸಾವಿರ ರೂ.ನೀಡುತ್ತಿದ್ದಾರೆ. ನಮ್ಮ ವಿವಿ ಮಾತ್ರವೇ ಕಡಿಮೆ ವೇತನ ನೀಡುತ್ತಿದೆ. ತಕ್ಷಣ ಇದನ್ನು ಹೆಚ್ಚಿಸಬೇಕೆಂದು ಸಂಶೋಧನಾ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

    ಯತ್ನಾಳ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ ಮೂವರು ಶಾಸಕರು!

    ಲಸಿಕೆ ಹಾಕಿಸಿಕೊಂಡ ಎರಡನೆಯ ದಿನಕ್ಕೇ ಸಚಿವರಿಗೆ ಬಿಗ್‌ ಶಾಕ್‌- ವರದಿಯಲ್ಲಿ ಕಾಣಿಸಿಕೊಂಡ್ತು ‘ಪಾಸಿಟಿವ್‌’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts