ಪಪಂ ವತಿಯಿಂದ ಪರಿಹಾರ ವಿತರಣೆ

ವಿರಾಜಪೇಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ವಾಸದ ಮನೆ ಹಾಗೂ ದಿನಬಳಕೆ ವಸ್ತುಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ಸಮೀರಾ ಅವರಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ 10,000 ರೂ. ಪರಿಹಾರ ನೀಡಿದರು. ]

ಪಟ್ಟಣದ ನೆಹರು ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 7ರ ನಿವಾಸಿ ಸಮೀರಾ ಎಂಬುವರ ವಾಸದ ಮನೆಯಲ್ಲಿ ಜ.10ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಪಾರ ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪಪಂ ಮುಖ್ಯಾಥಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದಸ್ಯರಾದ ಎಂ.ಕೆ ದೇಚಮ್ಮ, ಮತೀನ್, ಡಿ.ಪಿ ರಾಜೇಶ್ ಇತರರು ಹಾಜರಿದ್ದರು.