ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ತಲುಪಿಸಿ

blank

ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್ ಸೂಚನೆ

ಶ್ರೀರಂಗಪಟ್ಟಣ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಪೂರ್ಣ ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದ ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ಎಲ್.ದಿನೇಶ್ ತಿಳಿಸಿದರು.
ಪಟ್ಟಣದ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅವರ ಬದುಕನ್ನು ಸುಧಾರಣೆಯತ್ತ ಕೊಂಡೊಯ್ದಿದೆ. ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆ ಶೇ.96.19 ಗುರಿ ತಲುಪಿದೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 52025 ಫಲಾನುಭವಿಗಳಿದ್ದಾರೆ. ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆ ಸದ್ಬಳಕೆಯಾಗುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ನೇಮಕವಾದ ಬಳಿಕ ನಡೆಯುತ್ತಿರುವ ಪ್ರಥಮ ಸಭೆ ಇದಾಗಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರದ ಈ ಯೋಜನೆಗಳನ್ನು ಎಲ್ಲರಿಗೂ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅನುಷ್ಠಾನ ಸಮಿತಿ ಸದಸ್ಯರಾದ ವಿ.ನಾರಾಯಣಪ್ಪ, ಹೊಸಉಂಡುವಾಡಿ ಸಂಜಯ್, ಬೆಳಗೊಳ ರವಿಕುಮಾರ್, ಟಿ.ಕೃಷ್ಣ, ಗಣಂಗೂರು ಕೃಷ್ಣಕುಮಾರ್, ನಾಗರತ್ನ, ಸುಮತಿ, ನಾಗರಾಜು, ಸಲೀಂ, ಲೋಕೇಶ್, ಮನೋಜ್ ಹಾಗೂ ಸೆಸ್ಕ್ , ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ, ಸಾರಿಗೆ ಮತ್ತು ಆಹಾರ ಇಲಾಖೆ ಅಧಿಕಾರಿ ಸಿಬ್ಬಂದಿ ಇದ್ದರು.

Share This Article

ರಾಕ್ಷಸರ ಗುರು ಶುಕ್ರ ಗ್ರಹದ ಸಂಚಾರ: ಈ 3 ರಾಶಿಯವರಿಗೆ ಮುಂದಿನ 90 ದಿನ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಅಲರಾಂ ಇಲ್ಲದೇ ಬೆಳಗ್ಗೆ ಬೇಗ ಏಳುವುದು ಹೇಗೆ? ಇಲ್ಲಿವೆ ನೋಡಿ ಕೆಲವು ಬೆಸ್ಟ್​ ಟಿಪ್ಸ್​! Alarm

Alarm : ಬೆಳಗ್ಗೆ ಬೇಗ ಎಚ್ಚರಗೊಳ್ಳಲು ಬಹುತೇಕ ಮಂದಿ ಇಂದು ಅಲರಾಂ ಆಶ್ರಯಿಸಿದ್ದಾರೆ. ಅಲರಾಂ ಇಲ್ಲದೇ…

ದೇವರ ಪೂಜೆ ಮಾಡುವಾಗ ಕೆಟ್ಟ ಆಲೋಚನೆಗಳು ಬರುತ್ತವಾ? ನಿಮ್ಮ ಮನಸು ಶುದ್ಧವಾಗಿಲ್ಲ ಎಂದರ್ಥ ತಿಳಿದುಕೊಳ್ಳಿ… worship

worship : ದೇವರನ್ನು ಪೂಜಿಸುವಾಗ, ಆತನನ್ನು ಪೂಜಿಸುವ ಮೊದಲು ಮನಸ್ಸನ್ನು ಶಾಂತವಾಗಿರಿಸಿಕೊಂಡು ಅವನ ಕೇಂದ್ರೀಕರಿಸಬೇಕೆಂದು ಹೇಳುತ್ತಾರೆ.…