ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಏನಾದಳು ಗೊತ್ತಾ?

ನವದೆಹಲಿ: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಪ್ರೇಯಸಿಗಾಗಿ ಆಕೆಯ ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ವಾಯುವ್ಯ ದೆಹಲಿಯ ಬವಾನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪ್ರೇಯಸಿ ಏಂಜೆಲ್​ ಗುಪ್ತಾ ಅಲಿಯಾಸ್​ ಶಶಿ ಪ್ರಭಾ(26) ಮತ್ತು ಸ್ನೇಹಿತ ರಾಜೀವ್​ (40) ಎಂಬಾತನ ಸೇರಿ ಪತಿ ಮನ್​ಜೀತ್​(38) ಪತ್ನಿ ಸುನಿತಾರನ್ನು(38) ಕೊಲೆಗೈದಿದ್ದಾನೆ.

ಮನ್​ಜೀತ್​ ಮತ್ತು ಏಂಜೆಲ್​ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ಲ್ಯಾನ್​ ಮಾಡಿ ಆಕೆಯನ್ನು ಕೊಲೆ ಮಾಡಲಾಗಿದೆ. ಮೂರು ಬಾರಿ ಆಕೆ ಮೇಲೆ ಗುಂಡು ಹಾರಿಸಲಾಗಿದೆ. ಏಂಜಲ್​ ಗುಪ್ತಾ ವೃತ್ತಿಯಲ್ಲಿ ಮಾಡೆಲ್​ ಆಗಿದ್ದಾರೆ ಎಂದು ತಿಳಿದುಬಂದಿದ್ದು, ಮೂವರೂ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ರಜನೀಶ್​ ಗುಪ್ತ ತಿಳಿಸಿದ್ದಾರೆ.

ಮೃತ ಸುನಿತಾಗೆ 16 ವರ್ಷದ ಹೆಣ್ಣು ಮಗು ಮತ್ತು 8 ವರ್ಷದ ಗಂಡು ಮಗು ಇದ್ದರು. (ಏಜೆನ್ಸೀಸ್)