ನಾನು ಶಾಸಕನ ಪುತ್ರ ಎಂಬ ಸ್ಟಿಕರ್​ ಸ್ಪೀಕರ್​ ಅವರ ಪುತ್ರನದ್ದು ಎಂದ ಬಿಜೆಪಿ ಶಾಸಕನ ವಿರುದ್ಧ ಕ್ರಮದ ಬೆದರಿಕೆ

ನವದೆಹಲಿ: ವ್ಯಕ್ತಿಯೊಬ್ಬ ತಾನು ಶಾಸಕರ ಪುತ್ರ ಎಂಬ ಸ್ಟಿಕರ್​ ಅಂಟಿಸಿಕೊಂಡಿರುವ ಕಾರಿನಲ್ಲಿ ತಿರುಗಾಡುತ್ತಿದ್ದಾನೆ. ಈ ಕಾರು ದೆಹಲಿ ವಿಧಾನಸಭೆಯ ಸ್ಪೀಕರ್​ ರಾಮ್​ ನಿವಾಸ್​ ಗೋಯೆಲ್​ ಅವರ ಪುತ್ರನಿಗೆ ಸೇರಿದ್ದು ಎಂದು ಟ್ವೀಟ್​ ಮಾಡಿ, ತೋಜೋವಧೆಗೆ ಯತ್ನಿಸಿದ್ದಕ್ಕಾಗಿ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಶಾಸಕ ಮಂಜಿಂದರ್​ಸಿಂಗ್​ ಸಿರ್ಸಾ ಅವರಿಗೆ ನೋಟಿಸ್​ ನೀಡಿದ್ದಾರೆ.

ನನ್ನ ತೇಜೋವಧೆ ಮಾಡಿರುವ ನೀವು ಇನ್ನೊಂದು ವಾರದಲ್ಲಿ ಲಿಖಿತವಾಗಿ ಕ್ಷಮಾಪಣೆ ಕೋರಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿ ಇನ್ನೂ ಹಲವು ಬಗೆಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಬೆದರಿಸಿದ್ದಾರೆ.

ನವದೆಹಲಿಯ ನಿವಾಸಿಯೊಬ್ಬ ತನ್ನ ಕಾರಿನ ಹಿಂಭಾಗದ ಗಾಜಿನ ಮೇಲೆ ವಿಹಾನ್​, ಶಾಸಕನ ಪುತ್ರ ಎಂಬ ಸ್ಟಿಕರ್​ ಹಾಕಿಕೊಂಡು ತಿರುಗಾಡುತ್ತಿದ್ದಾನೆ. ಇದು ಸ್ಪೀಕರ್​ ಅವರಿಗೆ ಸೇರಿದ ಕಾರು. ಅವರ ಪುತ್ರನೇ ಈ ಕೃತ್ಯ ಎಸಗುತ್ತಿರುವುದಾಗಿ ಬಿಜೆಪಿಯ ಶಾಸಕ ಸಿರ್ಸಾ ಟ್ವೀಟ್​ ಮಾಡಿದ್ದರು. ಇದು ಸ್ಪೀಕರ್​ ಅವರ ಸಿಟ್ಟಿಗೆ ಕಾರಣವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *