More

    ಮತದಾರರ ಚೀಟಿಗೆ ಕ್ಯೂಆರ್​ ಅಳವಡಿಕೆ, ಮತಗಟ್ಟೆಯಲ್ಲಿ ಆ್ಯಪ್​; ಮತದಾನಕ್ಕೆ ದೆಹಲಿಯಲ್ಲಿ ನೂತನ ಪ್ರಯೋಗದ ಬಗ್ಗೆ ಇಲ್ಲಿದೆ ಮಾಹಿತಿ

    ನವದೆಹಲಿ: ಮುಂಬರುವ ದೆಹಲಿ ಚುನಾವಣೆಯಲ್ಲಿ ಟೆಕ್ನಾಲಜಿ ಬಹು ಮುಖ್ಯ ಪಾತ್ರ ವಹಿಸಲಿದೆ. ಮತದಾರರ ಗುರುತಿನ ಚೀಟಿಗೆ ಕ್ಯೂಆರ್​ ಕೋಡ್​ ಅಳವಡಿಸಲಾಗುತ್ತಿದೆ.

    ದೇಶದಲ್ಲೇ ಮೊದಲ ಬಾರಿಗೆ ಪ್ರತಿ ಮತದಾನ ಕೇಂದ್ರದಲ್ಲಿ ಬೂತ್ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ಈ ಕ್ಯೂರ್​ ಕೋಡ್​ ಅಳವಡಿಕೆಯಿಂದ ಮತದಾನದ ಪ್ರಕ್ರಿಯೆಗೆ ವೇಗ ಸಿಗಲಿದೆ. ಮತದಾರರ ಚೀಟಿಯಲ್ಲಿನ ಕೋಡ್​ನಿಂದ ಅವರ ಗುರುತು ಪತ್ತೆ ಹಚ್ಚಲು ಸುಲಭವಾಗಲಿದೆ.

    ಈ ಆ್ಯಪ್​ನಿಂದ ಮತ ಕೇಂದ್ರದ ಮುಂದೆ ಎಷ್ಟು ಜನ ಸಾಲಿನಲ್ಲಿ ನಿಂತಿದ್ದಾರೆ ಎನ್ನುವ ಮಾಹಿತಿ ಸಿಗಲಿದೆ. ಇದರಿಂದ ಯಾವ ಸಮಯಕ್ಕೆ ಮತದಾನಕ್ಕೆ ಬರಬಹುದು ಎಂದು ಅಂದಾಜಿಸಬಹುದು. ಹಾಗಾಗಿ ಇನ್ನು ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ.

    ಬೂತ್​ಗೆ ಮೊಬೈಲ್​ ತರಲು ಅನುಮತಿ ನೀಡಿ ಅದರಿಂದ ಕ್ಯೂಆರ್​ ಕೋಡ್​ನ್ನು ಡೌನ್​ಲೋಡ್​ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ. ಮತದಾರರು ಚೀಟಿಯನ್ನು ತರದಿದ್ದರೂ ಆ್ಯಪ್​ ಮೂಲಕ ಅವರ ಮತದಾನದ ಹಕ್ಕನ್ನು ಕಾಯ್ದಿರಿಸಲಾಗುವಂತೆ ಮಾಡುವ ಪ್ರಸ್ತಾಪವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮತದಾನಕ್ಕೆ ಅನುಕೂಲವಾಗಲು ಬ್ರೈಲ್​ ಎಪಿಕ್​, ಬ್ರೈಲ್​ನಲ್ಲೆ ಮತದಾರರ ಚೀಟಿ, ವ್ಹೀಲ್​ ಚೇರ್​, ಸ್ವಯಂ ಸೇವಕರು, ಮತಗಟ್ಟೆಗೆ ಕರೆ ತರಲು ಮತ್ತು ಕಳುಹಿಸಲು ಅಂಗವಿಕಲರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts