ದೆಹಲಿ ನುಸುಳಿರುವ ಶಂಕಿತ ಉಗ್ರರ ಫೋಟೊ ಬಿಡುಗಡೆ, ಹೈ ಅಲರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಗೆ ನುಸುಳಿರುವ ಶಂಕೆ ಮೇರೆಗೆ ಇಬ್ಬರು ಶಂಕಿತ ಭಯೋತ್ಪಾದಕರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಮಾಡಿದ್ದಾರೆ.

ದೆಹಲಿ 360 ಕಿ.ಮೀ., ಫಿರೋಜ್‌ಪುರ 9 ಕಿ.ಮೀ. ಎಂದು ಬರೆದಿರುವ ಮೈಲಿಗಲ್ಲಿನ ಬಳಿ ನಿಂತು ಕಪ್ಪು ಪೈಜಾಮ ಧರಿಸಿರುವ ಮತ್ತು ತಲೆಗೆ ಧಾರ್ಮಿಕ ಟೋಪಿ ಧರಿಸಿ ಗಡ್ಡ ಬಿಟ್ಟುಕೊಂಡಿರುವ ಉಗ್ರರ ಛಾಯಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾದರೆ ಕೂಡಲೇ ಪಹಾರ್‌ಗಂಜ್‌ ಠಾಣೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಜೈಶ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಆರರಿಂದ ಏಳು ಉಗ್ರರು ಭಾರತ – ಪಾಕಿಸ್ತಾನದ ಪಂಜಾಬ್ ಫಿರೋಜ್ ಪುರ ಗಡಿ ಮೂಲಕ ದೆಹಲಿ ಕಡೆಗೆ ನುಸುಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪಂಜಾಬ್‌ ಪೊಲೀಸರು ಹೈಅಲರ್ಟ್‌ ಘೋಷಿಸಿದ್ದರು.

ಗುರುವಾರವಷ್ಟೇ ಪಂಜಾಬ್‌ ಐಜಿಪಿ ಕಾನೂನು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದು, ಉಗ್ರರು ನುಸುಳಿರುವ ಶಂಕೆ ಮೇರೆಗೆ ಎಲ್ಲ ಪ್ರಮುಖ ಮಾರ್ಗಗಳಲ್ಲಿಯೂ ಚೆಕ್‌ಪಾಯಿಂಟ್‌ ಸ್ಥಾಪನೆ, ಹೊರಹೋಗುವ ಮತ್ತು ಬರುವ ಎಲ್ಲ ವಾಹನಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವುದು. ಭಾರತ-ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ ಬಳಿ ಪರಿಶೀಲನೆ ಮತ್ತು ಭದ್ರತೆ ಬಲವಪಡಿಸುವ ಕುರಿತು ಹೇಳಿದ್ದಾರೆ. ಗಡಿ ಪ್ರದೇಶಗಳಲ್ಲಿಯೂ ಅಗತ್ಯ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮತ್ತು ಇತರ ರಕ್ಷಣಾ ಸಂಸ್ಥೆಗಳನ್ನು ನಿಯೋಜಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪಂಜಾಬ್ ಪ್ರಾಂತ್ಯದಿಂದ ಇಬ್ಬರು ಉಗ್ರರು ನುಸುಳಿರುವ ಶಂಕೆಯಿದ್ದು, ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆ. ಸಾರ್ವಜನಿಕರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)