ಒಂದೇ ಗೋತ್ರದ ವ್ಯಕ್ತಿಯೊಂದಿಗೆ ಮಗಳ ರಹಸ್ಯ ಮದುವೆ ತಿಳಿದ ಪಾಲಕರು ಮಾಡಿದ್ದು ಹೀನ ಕೃತ್ಯ

ನವದೆಹಲಿ: ಒಂದೇ ಗೋತ್ರದ ವ್ಯಕ್ತಿಯೊಂದಿಗೆ ರಹಸ್ಯವಾಗಿ ಮದುವೆಯಾದಳು ಎಂಬ ಕಾರಣಕ್ಕೆ 25 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಲಕರು ಬಳಿಕ ಉತ್ತರ ಪ್ರದೇಶದ ಆಲಿಗಢಕ್ಕೆ ತೆರಳಿ ಕಾಲುವೆಯೊಂದರಲ್ಲಿ ಮೃತದೇಹವನ್ನು ಎಸೆದು ಬಂದ ನಂತರ ಬಂಧನಕ್ಕೀಡಾಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿರುವುದಾಗಿ ಶನಿವಾರ ವರದಿಯಾಗಿದೆ.

ಶೀತಲ್​ ಚೌಧರಿ ಕೊಲೆಯಾದ ದುರ್ದೈವಿ. ಒಂದೇ ಸಮುದಾಯಕ್ಕೆ ಸೇರಿದ ಬಾಯ್​ಫ್ರೆಂಡ್​ ಅಂಕಿತ್​ ಭಟಿ ಎಂಬುವನ ಜತೆ ಶೀತಲ್ ರಹಸ್ಯವಾಗಿ ಮದುವೆಯಾಗಿದ್ದಳು ಎನ್ನಲಾಗಿದೆ.

ಕಳೆದ ಜನವರಿ 29ರಂದೇ ಈ ಘಟನೆ ನಡೆದಿದ್ದು, ಪಾಲಕರು ಇಷ್ಟು ದಿನ ರಹಸ್ಯ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಹಲವು ದಿನಗಳವರೆಗೆ ಶೀತಲ್​ ಸಂಪರ್ಕಕ್ಕೆ ಸಿಗದಿದ್ದಾಗ ಫೆ.18ರಂದು ಭಟಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದ.

ಪ್ರಕರಣ ದಾಖಲಿಸಿಕೊಂಡ ಮೂರು ದಿನಗಳ ಬಳಿಕ ನ್ಯೂ ಅಶೋಕ ನಗರ ಠಾಣಾ ಪೊಲೀಸರು ತಂದೆ-ತಾಯಿ ಸೇರಿದಂತೆ ಶೀತಲ್​ ಕುಟುಂಬದ 6 ಮಂದಿಯನ್ನು ಬಂಧಿಸಿದ್ದಾರೆ. ತಂದೆ ರವಿಂದರ್​ ಛೌಧರಿ, ತಾಯಿ ಸುಮನ್​, ಅಂಕಲ್​ ಸಂಜಯ್​ ಮತ್ತು ಸಂಬಂಧಿತರಾದ ಓಂ ಪ್ರಕಾಶ್​ ಪರ್ವೇಶ್​ ಮತ್ತು ಅಂಕಿತ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಡಿಸಿಪಿ(ಪೂರ್ವ) ಜಸ್ಮೀತ್​ ಸಿಂಗ್ ಮಾಹಿತಿ​ ಖಚಿತಪಡಿಸಿದ್ದಾರೆ.

ಒಂದೇ ಗೋತ್ರದ ವ್ಯಕ್ತಿಯೊಂದಿಗೆ ಮಗಳ ರಹಸ್ಯ ಮದುವೆ ತಿಳಿದ ಪಾಲಕರು ಮಾಡಿದ್ದು ಹೀನ ಕೃತ್ಯ

ಜನವರಿ 30ರಂದು ಶೀತಲ್​ ಮೃತದೇಹ ಮತ್ತು ಆಕೆಗೆ ಸಂಬಂಧಿಸಿದ ವಸ್ತುಗಳನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಗುರುತಿಸಲಾಗದೇ ಅಂತ್ಯಸಂಸ್ಕಾರವನ್ನು ನೇರವೇರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಸದ್ಯ ಕುಟುಂಬದವರ ವಿರುದ್ಧ ಕೊಲೆ, ಸಾಕ್ಷ್ಯಾನಾಶ ಹಾಗೂ ಅಪರಾಧ ಕುತಂತ್ರ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ ಬಳಿಕ 14 ದಿನಗಳವರೆಗೂ ನ್ಯಾಯಾಗ ಬಂಧನ ಹಿನ್ನೆಲೆಯಲ್ಲಿ ತಿಹಾರ್​ ಜೈಲಿಗೆ ಕಳುಹಿಸಲಾಗಿದೆ.

ಪ್ರಕರಣ ತನಿಖಾ ವೇಳೆ ಆಘಾತಕಾರಿ ಮಾಹಿತಿಯನ್ನು ಬಾಯ್ಬಿಟ್ಟಿರುವ ಆರೋಪಿಗಳು ಜ.29ರಂದು ಶೀತಲ್​ರನ್ನು ಕತ್ತುಹಿಸುಕಿ ಸಾಯಿಸಿ, ಬಳಿಕ ವ್ಯಾಗನ್​ ಆರ್​ ಕಾರಿನಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾರೆ. ಸಂಬಂಧಿಕರು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಮೃತದೇಹವನ್ನು ದೆಹಲಿಯಿಂದ 80 ರಿಂದ 100 ಕಿ.ಮೀ ದೂರದಲ್ಲಿರುವ ಆಲಿಗಢ್​ನ ಜವಾನ್​ ಬಳಿಯಿರುವ ಕಾಲುವೆಗೆ ಎಸೆದಿದ್ದಾರೆ. ಅದೇ ರಾತ್ರಿ ದೆಹಲಿಗೆ ಮರಳಿದ್ದಾರೆ.

ತನಿಖಾ ವೇಳೆ ಕುಟುಂಬದ ಕಾಲ್​ ಡಿಟೇಲ್ಸ್ ಪರಿಶೀಲಿಸಿದಾಗ ಉತ್ತರ ಪ್ರದೇಶಕ್ಕೆ ಹೋಗುವಾಗ ಪರಸ್ಪರ ಕುಟುಂಬದವರು ಮಾತಾಡಿಕೊಂಡಿರುವುದು ತಿಳಿದುಬಂದಿದೆ. ಬುಧವಾರ ರಾತ್ರಿ ಪ್ರತ್ಯೇಕವಾಗಿ ಒಬ್ಬೊಬ್ಬರನ್ನು ವಿಚಾರಣೆ ನಡೆಸಿದಾಗ ಗೊಂದಲ ಹೇಳಿಕೆಯನ್ನು ನೀಡಿದ್ದಾರೆ. ಕೊನೆಗೆ ತಪ್ಪೊಪ್ಪಿಕೊಂಡ ಅವರನ್ನು ಮೃತದೇಹ ಎಸೆದಿದ್ದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆದರೆ, ಮೃತದೇಹ ಅಲ್ಲಿರಲಿಲ್ಲ.

ಇದೇ ವೇಳೆ ದೆಹಲಿ ಪೊಲೀಸರು ಆಲಿಗಢ ಪೊಲೀಸರನ್ನು ಸಂಪರ್ಕಿಸಿದಾಗ ಜನವರಿ 30ರಂದು ಪತ್ತೆಯಾಗಿದ್ದ ಮೃತದೇಹದ ವಿವರ ಹಾಗು ವಸ್ತುಗಳನ್ನು ತೋರಿಸಿದ್ದಾರೆ. ಫೆ. 2ರವರೆಗೂ ಮೃತದೇಹವನ್ನು ಶವಗಾರದಲ್ಲಿ ಇಡಲಾಗಿತ್ತು. ಆದರೆ, ಯಾರೊಬ್ಬರು ನಮ್ಮನ್ನು ಸಂಪರ್ಕಿಸಿರಲಿಲ್ಲ. ಆದರೆ, ಆಕೆಗೆ ಸಂಬಂಧಿಸಿದ ವಸ್ತುಗಳನ್ನು ರಕ್ಷಿಸಿ ಇಟ್ಟಿದ್ದೆವು ಎಂದು ಆಲಿಗಢ ಪೊಲೀಸರು ತಿಳಿಸಿದ್ದಾರೆ. ಆಕೆಯ ಬಟ್ಟೆ ಮತ್ತು ಫೋಟೋದಿಂದ ಭಟಿ ಶೀತಲ್​ ಮೃತದೇಹವನ್ನು ಗುರುತಿಸಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…