ದರ ಏರಿಕೆಗೆ ವಿರಾಮ: ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಷ್ಟಿದೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ ಆರು ದಿನಗಳ ಏರಿಕೆ ಕಂಡ ಬಳಿಕ ಇಂದು ಬುಧವಾರವೂ ಕೊಂಚ ಏರಿಕೆ ಕಂಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿಲ್ಲ.

ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 04 ಪೈಸೆ ಏರಿಕೆಯಾಗಿ 73.66 ರೂ.ಗಳಷ್ಟಿದ್ದರೆ, ಡೀಸೆಲ್‌ ಬೆಲೆಯಲ್ಲೂ 04 ಪೈಸೆಯಷ್ಟು ಏರಿಕೆಯಾಗಿ 68.11 ರೂ.ಗೆ ಮಾರಾಟವಾಗುತ್ತಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 71.27 ರೂ.ಗಳಷ್ಟಿದ್ದರೆ, ಡೀಸೆಲ್‌ 65.90 ರೂ.ಗಳಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್‌ 76.90 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಡೀಸೆಲ್‌ ಲೀ.ಗೆ 69.01 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 73.99 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 69.62 ರೂ.ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 73.36 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 67.68 ರೂ.ಗಳಷ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಮತ್ತು ಡಾಲರ್‌ ಎದುರಲ್ಲಿ ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಇಂಧನ ಬೆಲೆಯಲ್ಲಿ ಬೆಲೆ ಏರಿಕೆ ಕಂಡುಬರುತ್ತಿದೆ. (ಏಜೆನ್ಸೀಸ್)