ದೆಹಲಿಯಲ್ಲಿ ಹೋಟೆಲ್​ಗೆ ಬೆಂಕಿ ಬಿದ್ದು 9 ಜನರು ಸಾವು, ಏಳುಮಂದಿಗೆ ಗಂಭೀರ ಗಾಯ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಹೋಟೆಲ್​ಗೆ ಬೆಂಕಿ ಬಿದ್ದು 9 ಜನ ಮೃತಪಟ್ಟಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕರೋಲ್​ ಬಾಘ್ ಪ್ರದೇಶಲ್ಲಿರುವ  ಹೋಟೆಲ್​ ಅರ್ಪಿತ್​​ ಪ್ಯಾಲೇಸ್​ಗೆ ಮುಂಜಾನೆ 4.35ಕ್ಕೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

26 ಅಗ್ನಿಶಾಮಕ ದಳಗಳು ಹೋಟೆಲ್​ ಬಳಿಯಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. 25 ಜನರನ್ನು ಬೇರೆಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಗಿದೆ. ಮತ್ತಿಬ್ಬರು ಹೋಟೆಲ್​ ಕಟ್ಟಡದಿಂದಲೇ ಜಿಗಿದಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

ಬೆಂಕಿ ನಂದಿಸುವ ಹಾಗೂ ಜನರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.

Leave a Reply

Your email address will not be published. Required fields are marked *