VIDEO|ಯುವತಿಯೊಂದಿಗೆ ಟಿಕ್​​ ಟಾಕ್​​ ಮಾಡಲು ಹೋಗಿ ಸರ್ಕಾರಿ ಕೆಲಸ ಕಳೆದುಕೊಂಡ ಚಾಲಕ, ನಿರ್ವಾಹಕ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಟಿಕ್​​ ಟಾಕ್ ಗೀಳು ಹೆಚ್ಚಾಗಿದ್ದು, ದೆಹಲಿ ಸಾರಿಗೆ ನಿಗಮಕ್ಕೆ ಸೇರಿದ ಬಸ್​​​​​​​ನ ಚಾಲಕ ಮತ್ತು ನಿರ್ವಾಹಕ ಯುವತಿಯೊಂದಿಗೆ ಟಿಕ್​​ ಟಾಕ್​​ ವಿಡಿಯೋ ಮಾಡಲು ಹೋಗಿ ಕೆಲಸ ಕಳೆದುಕೊಂಡಿದ್ದಾರೆ.

ನಗರದ ಜನಕಪುರಿ ಎಂಬಲ್ಲಿ ಬಸ್ಸನ್ನು ನಿಲ್ಲಿಸಿ ಟಿಕ್​​ ಟಾಕ್​​ ವಿಡಿಯೋ ಮಾಡಲಾಗಿದೆ. ಯುವತಿ ಚಾಲಕ ಮತ್ತು ನಿರ್ವಾಹಕರ ಮುಂದೆ ಹಿಂದಿ ಹಾಡಿಗೆ ಡ್ಯಾನ್ಸ್​​ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಮೇಲಾಧಿಕಾರಿಗಳು ಅವರ ವಿರುದ್ಧ ಕೆಂಡಮಂಡಲವಾಗಿದ್ದಾರೆ.

ಚಾಲಕ ಮತ್ತು ನಿರ್ವಾಹಕ ಗುತ್ತಿಗೆ ಉದ್ಯೋಗಿಗಳಾಗಿದ್ದು, ಸರ್ಕಾರಿ ಸೇವೆ ವೇಳೆ ಅಧಿಕಾರ ದುರುಪಯೋಗ ಮಾಡಿದ ಹಿನ್ನೆಲೆ ಅವರನ್ನು ಸರ್ಕಾರಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಯುವತಿ ಅವರ ಸ್ನೇಹಿತೆಯಾಗಿದ್ದು, ಆಕೆಯ ಹೆಸರು ತಿಳಿದು ಬಂದಿಲ್ಲ. ಇಂತಹ ಟಿಕ್​​ ಟಾಕ್​​ ವಿಡಿಯೋಗಳಿಂದ ಅನೇಕ ಮಂದಿ ಕೆಲಸ ಹಾಗೂ ಪ್ರಾಣ ಕಳೆದುಕೊಂಡಿದ್ದಾರೆ . (ಏಜೆನ್ಸೀಸ್​)

Leave a Reply

Your email address will not be published. Required fields are marked *