Friday, 16th November 2018  

Vijayavani

Breaking News

ರಾಷ್ಟ್ರರಾಜಧಾನಿ ಕಸ ವಿಲೇವಾರಿಗೆ ಇಲ್ಲ ಕ್ರಮ: ಲೆಫ್ಟಿನಂಟ್ ಗವರ್ನರ್​ಗೆ ಸುಪ್ರೀಂ ತರಾಟೆ

Thursday, 12.07.2018, 5:08 PM       No Comments

ಮುಂಬೈ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆ ಹಾಗೂ ಅಸಮರ್ಪಕ ಕಸ ವಿಲೇವಾರಿ ಬಗ್ಗೆ ದೆಹಲಿ ಲೆಫ್ಟಿನಂಟ್​ ಗವರ್ನರ್ (ಎಲ್​ಜಿ) ಅನಿಲ್​ ಬೈಜಲ್ ಅವರನ್ನು ಸುಪ್ರೀಂಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ ಮೇಲೆ ಎಲ್​ಜಿ ಅಧಿಕಾರ ಚಲಾಯಿಸಬಹುದಾದರೂ ಸ್ವಚ್ಛತೆ ವಿಚಾರದಲ್ಲಿ ಇನ್ನೂ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದಕ್ಕೆ ಕಾರಣ ಕೇಳಿದೆ.

“ನೀವೇ ಹೇಳುತ್ತೀರಿ, ನನಗೆ ಅಧಿಕಾರವಿದೆ. ನಾನು ಸೂಪರ್​ಮ್ಯಾನ್​, ವ್ಯವಸ್ಥೆ ಬದಲಿಸುತ್ತೇನೆ ಎಂದೆಲ್ಲ ಹೇಳುತ್ತೀರಿ. ಆದರೆ, ಕಸದ ಸಮಸ್ಯೆ ಪರಿಹರಿಸಲು ಏನನ್ನೂ ಮಾಡಿಲ್ಲ” ಎಂದು ಸುಪ್ರೀಂಕೋರ್ಟ್​ ಅನಿಲ್ ಬೈಜಲ್​ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ದೆಹಲಿಯಲ್ಲಿ ಭೂಕುಸಿತಕ್ಕೆ ಒಳಗಾದ ಪ್ರದೇಶಗಳಾದ ಘಾಜಿಪುರ, ಭಾಲಾಸ್ವಾ ಹಾಗೂ ಒಖಾಲಾಗಳ ಕಸ ವಿಲೇವಾರಿ ಹಾಗೂ ಸ್ವಚ್ಛತೆಯ ಬಗ್ಗೆ ನಡೆಸಲಾದ ಮೂರು ಸಭೆಗಳಿಗೂ ಲೆಫ್ಟಿನಂಟ್​ ಗವರ್ನರ್​ ಕಚೇರಿಯಿಂದ ಯಾರೂ ಆಗಮಿಸಿಲ್ಲ ಎಂಬ ಅಂಶವನ್ನು ಪರಿಶೀಲಿಸಿದ ನಂತರ ಸುಪ್ರೀಂಕೋರ್ಟ್​ ಅನಿಲ್​ ಅವರಿಗೆ ಛೀಮಾರಿ ಹಾಕಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಪರ್ವತದಷ್ಟು ಕಸ ವಿಲೇವಾರಿಯ ಜವಾಬ್ದಾರಿ ತೆಗೆದುಕೊಳ್ಳುವವರು ಸಂಬಂಧಪಟ್ಟ ವರದಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್​ಗೆ ಸಲ್ಲಿಸಬೇಕೋ ಅಥವಾ ಲೆಫ್ಟಿನಂಟ್​ ಗವರ್ನರ್​ಗೆ ನೀಡಬೇಕೋ ಎಂಬ ಬಗ್ಗೆ ಕೇಂದ್ರ ಹಾಗೂ ದೆಹಲಿ ರಾಜ್ಯ ಸರ್ಕಾರದ ಬಳಿ ಸ್ಪಷ್ಟನೆ ಕೇಳಿದ್ದ ಸುಪ್ರೀಂಕೋರ್ಟ್​ ಮರುದಿನವೇ ಲೆಫ್ಟಿನಂಟ್​ ಗವರ್ನರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಕಸದ ರಾಶಿಯ ಬಗ್ಗೆ ಸುಪ್ರೀಂಕೋರ್ಟ್​ ಮಾರ್ಚ್​ ನಲ್ಲೇ ಧ್ವನಿ ಎತ್ತಿತ್ತು. ಘಾಜಿಪುರನ ಕಸದ ರಾಶಿ ಇನ್ನೂ ಸ್ವಲ್ಪದಿನ ಹೀಗೇ ಮುಂದುವರಿದರೆ 73 ಮೀಟರ್​ ಎತ್ತರದ ಕುತುಬ್​ ಮಿನಾರ್​ ನ್ನೂ ಮೀರಿಸುತ್ತದೆ. ಹಾಗೂ ಇದರ ಮೇಲೆ ಹಾರುವ ವಿಮಾನಗಳಿಗೆ ಎಚ್ಚರಿಕೆ ನೀಡಲು ಮೇಲೊಂದು ಕೆಂಪುದೀಪ ಇಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿತ್ತು.

Leave a Reply

Your email address will not be published. Required fields are marked *

Back To Top