ಡೆಲ್ಲಿ ಡೇರ್​ ಡೆವಿಲ್ಸ್​ ಇನ್ನು ಮುಂದೆ ಡೆಲ್ಲಿ ಕ್ಯಾಪಿಟಲ್ಸ್​

ದೆಹಲಿ: ಭಾರತದಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆರಂಭವಾದಾಗಿನಿಂದಲೂ ಅಸ್ತಿತ್ವದಲ್ಲಿರುವ ಡೆಲ್ಲಿ ಡೇರ್​ ಡೆವಿಲ್ಸ್​ ತಂಡ ಮರು ನಾಮಕರಣಗೊಂಡಿದೆ.

ಇಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ತಂಡಕ್ಕೆ ಮರುನಾಮಕರಣ ಮಾಡಿರುವುದಾಗಿ ತಂಡದ ಫ್ರಾಂಚೈಸಿ ಘೋಷಿಸಿದೆ. ಅದರಂತೆ ತಂಡದ ಹೆಸರು ಇನ್ನುಮುಂದೆ ಡೆಲ್ಲಿ ಕ್ಯಾಪಿಟಲ್ಸ್​ ಆಗಿರಲಿದೆ. ಇದೇ ವೇಳೆ ತಂಡದ ಲಾಂಛನವನ್ನೂ ಬಿಡುಗಡೆ ಮಾಡಲಾಗಿದೆ.

2008ರಲ್ಲಿ ಐಪಿಎಲ್​ ಆರಂಭವಾದಾಗಿನಿಂದಲೂ ಡೆಲ್ಲಿ ಡೇರ್​​ ಡೆವಿಲ್ಸ್​ ತಂಡ ಕೂಟದ ಭಾಗವಾಗಿ ಆಡುತ್ತಿದೆ. ಆರಂಭದ ಎರಡು ಕೂಟಗಳಲ್ಲಿ ಸೆಮಿಫೈನಲ್​ ತಲುಪಿರುವ ಡೆಲ್ಲಿ ತಂಡ, ಒಂದು ಬಾರಿ ಮಾತ್ರ ಪ್ಲೇಆಫ್ ತಲುಪಿತ್ತು.

ಸದ್ಯ ತಂಡದ ಮೇಲೆ ಜಿಎಂಅರ್​ ಗ್ರೂಪ್​ ಮತ್ತು ಮುಂಬೈ ಮೂಲದ ಜಿಂದಾಲ್​ ಗ್ರೂಪ್​ಗಳು ಸಮನ ಪಾಲುದಾರಿಕೆ ಹೊಂದಿವೆ.