ದೆಹಲಿಯ ತೀವ್ರ ಚಳಿಯಿಂದ ಪಾರಾಗಲು ನಿರಾಶ್ರಿತರಿಗೆ ರಾತ್ರಿ ಆಶ್ರಯ ಮನೆಗಳೇ ಬೆಚ್ಚನೆಯ ತಾಣ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಕುಸಿದಿದ್ದು, ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ನಿರಾಶ್ರಿತರು ರಾತ್ರಿ ಆಶ್ರಯಗಳನ್ನು ಅವಲಂಬಿಸುತ್ತಿದ್ದಾರೆ.

ರೇನ್‌ ಬಸಾರಸ್‌(ಮಳೆ ಆಧರಿತ) ತಾಣಗಳೆಂದೇ ಪ್ರಸಿದ್ಧಿಯಾಗಿರುವ ರಾತ್ರಿ ಆಶ್ರಯ ಮನೆಗಳನ್ನು ಸರ್ಕಾರವು ಚಳಿಗಾಲದಲ್ಲಿ ನಿರಾಶ್ರಿತರು ರಾತ್ರಿಗಳನ್ನು ಕಳೆಯಲೆಂದೇ ನಿರ್ಮಿಸಿತ್ತು.

ರಾತ್ರಿ ಆಶ್ರಯ ಮನೆಗಳನ್ನು ಅವಲಂಬಿಸಿರುವ ನುಸ್ರತ್‌ ಮಾತನಾಡಿ, ಚಳಿಗಾಲದಲ್ಲಿ ತೀವ್ರ ಚಳಿಯಿಂದ ಜನರನ್ನು ರಕ್ಷಿಸಲು ದೆಹಲಿ ಸರ್ಕಾರ ತೆಗೆದುಕೊಂಡಿರುವ ಕ್ರಮವು ಶ್ಲಾಘನೀಯ. ನನ್ನಂತ ದಿನಗೂಲಿ ಕಾರ್ಮಿಕರು ದೆಹಲಿಯಂತ ನಗರಗಳಲ್ಲಿ ಮನೆಗಳನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇಲ್ಲಿ ಪ್ರತಿ ದಿನವನ್ನು ಕಳೆಯುವುದು ಕೂಡ ಸವಾಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಸರಯ್‌ ಕಾಲೇ ಖಾನ್‌ನಲ್ಲಿರುವ ಆಶ್ರಯ ಮನೆಯನ್ನು ನೋಡಿಕೊಳ್ಳುವ ರಾಜಯ್‌ರಂಜನ್‌ ಮಾತನಾಡಿ, ಸದ್ಯ ಆಶ್ರಯ ಮನೆಯಲ್ಲಿ 54 ಜನರಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಇಲ್ಲಿ ಜನರಿಗೆ ಚಾಪೆಗಳು, ಹಾಸಿಗೆಗಳು ಮತ್ತು ಇತರೆ ಅಗತ್ಯ ಸೌಲಭ್ಯಗಳು ಬೇಕಾಗಿವೆ. ಆದರೆ, ಇದಕ್ಕೂ ಮುನ್ನ ಹೊರಗಿನವರು ಬೆಚ್ಚಗಿನ ಬಟ್ಟೆಗಳನ್ನು ಇಲ್ಲಿ ತಂಗುವ ಜನರಿಗೆ ಒದಗಿಸುತ್ತಿದ್ದರು. ಆದರೆ, ಇದೀಗ ಯಾರೂ ಕೂಡ ಹೊದಿಕೆಗಳನ್ನು ವಿತರಿಸಲು ಇದುವರೆಗೂ ಮುಂದಾಗಿಲ್ಲ. ಮುಖ್ಯವಾಗಿ ಜನರ ರಕ್ಷಣೆ ಕುರಿತು ಗಮಗ ಹರಿಸಿದ್ದು, ಸಮಸ್ಯೆ ಉದ್ಭವಿಸಿದರೆ ಇಲ್ಲೇ ಸಮೀಪವಿರುವ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು. (ಏಜೆನ್ಸೀಸ್)