ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ, 12 ಜನ ಶಾಸಕರಿಗೆ ಜಾಮೀನು

ನವದೆಹಲಿ: ಸರ್ಕಾರದ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಮತ್ತು ಆಪ್​ನ 12 ಶಾಸಕರಿಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ.

ಅಂಶು ಪ್ರಕಾಶ್​ ವಿರುದ್ಧ ಪಿತೂರಿ ಮಾಡಿ ಅವರಿಗೆ ಶಿಕ್ಷೆ ನೀಡಿದ್ದಾರೆ, ಹಲ್ಲೆ ನಡೆಸಿ ಸಾರ್ವಜನಿಕ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂಬಿತ್ಯಾದಿ ಸೇರಿ ಹಲವು ಪ್ರಕರಣಗಳು ಸಿಎಂ ಕೇಜ್ರಿವಾಲ್​ ಮತ್ತು ಉಪಮುಖ್ಯಮಂತ್ರಿ ಮನೀಷ್​ ಸಿಸೋದಿಯಾ ವಿರುದ್ಧ ದಾಖಲಾಗಿದ್ದವು.

ಫೆ.19 ಮುಖ್ಯಮಂತ್ರಿ ಕಚೇರಿಯಲ್ಲಿ ತಮ್ಮ ಮೇಲೆ ಮುಖ್ಯಮಂತ್ರಿ ಹಾಗೂ ಶಾಸಕರು ತಮ್ಮ ಹಲ್ಲೆ ನಡೆದಿದ್ದಾಗಿ ಅಂಶು ಪ್ರಕಾಶ್​ ಹೇಳಿದ್ದರು.
ಈ ಸಮಯದಲ್ಲಿ ಇದ್ದ ಶಾಸಕರಾದ ಆಮ್​ ಆದ್ಮಿ ಪಕ್ಷದ ಅಮಾನಾತುಲ್ಲಾಖಾನ್​, ಪ್ರಕಾಶ್​ ಜರ್ವಲ್, ನಿತಿನ್​ ತ್ಯಾಗಿ, ರಿತುರಾಜ್​ ಗೋವಿಂದ್​, ಸಂಜೀವ್​ ಝಾ, ಅಜಯ್​ ದತ್ತ್​, ರಾಜೇಶ್​ ರಿಷಿ, ರಾಜೇಶ್​ ಗುಪ್ತಾ, ಮದನ್ ಲಾಲ್​, ಪ್ರವೀಣ್​ ಕುಮಾರ್​ ಮತ್ತು ಮೋಹನಿಯಾ ಕೂಡ ಆರೋಪಿಗಳೆಂದು ಹೇಳಲಾಗಿತ್ತು. ಆ.13 ರಂದು ಪೊಲೀಸರು ಚಾರ್ಜ್​ ಶೀಟ್​ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್​ ಇಂದು ಎಲ್ಲರಿಗೂ ತಲಾ 1 ಲಕ್ಷ ರೂ.ಮೌಲ್ಯದ ಶೂರಿಟಿಯೊಂದಿಗೆ ಜಾಮೀನು ನೀಡಿದೆ.