ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅವರಿಂದ್​ ಕೇಜ್ರಿವಾಲ್​ ಅವರಿಗೆ ನಿಮ್ಮ ಮಗಳನ್ನು ಅಪಹರಿಸುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಇ-ಮೇಲ್​ ಕಳುಹಿಸಿದ್ದಾನೆ.

ಜ. 9 ರಂದು ಬುಧವಾರ ಇ-ಮೇಲ್​ ಬಂದಿರುವುದಾಗಿ ತಿಳಿದು ಬಂದಿದ್ದು, ಅದರಲ್ಲಿ ಅನಾಮಿಕ ವ್ಯಕ್ತಿ ‘ನಿಮ್ಮ ಮಗಳು ಹರ್ಷಿತಾ ಕೇಜ್ರಿವಾಲ್​ಳನ್ನು ಅಪಹರಿಸುತ್ತೇವೆ, ಆಕೆಯನ್ನು ಸಾಧ್ಯವಾದರೆ ಕಾಪಾಡಿಕೊಳ್ಳಿ’ ಎಂದು ಬೆದರಿಕೆ ಹಾಕಲಾಗಿದೆ ಎಂದು ಮೂಲಳಿಂದ ತಿಳಿದುಬಂದಿದೆ.

ಬೆದರಿಕೆ ಇ-ಮೇಲ್​ ಅನ್ನು ದೆಹಲಿ ಸರ್ಕಾರ ದೆಹಲಿ ಪೊಲೀಸ್​ ಕಮಿಷನರ್​ಗೆ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್​ ಮಗಳಿಗೆ ದೆಹಲಿ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಜತೆಗೆ ದೆಹಲಿಯ ಸೈಬರ್​ ಸೆಲ್​ ಇ-ಮೇಲ್​ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದೆ.

ಅರವಿಂದ್​ ಕೇಜ್ರಿವಾಲ್​ಗೆ ಹರ್ಷಿತಾ ಮತ್ತು ಪುಲ್ಕಿತ್​ ಕೇಜ್ರಿವಾಲ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಹರ್ಷಿತಾ 2014ರಲ್ಲಿ ಸಿಬಿಎಸ್​ಸಿಯಲ್ಲಿ 96% ಅಂಕ ಪಡೆದು ಸುದ್ದಿಯಾಗಿದ್ದರು. ನಂತರ ಆಕೆ ಐಐಟಿ ದೆಹಲಿಯಿಂದ ಕೆಮಿಕಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದಾರೆ. (ಏಜೆನ್ಸೀಸ್​)