ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಭರದ ಸಿದ್ಧತೆ ಕೈಗೊಂಡಿದೆ. ಸರಿಯಾಗಿ 2 ವಾರಗಳಲ್ಲಿ ಬಹುನಿರೀಕ್ಷಿತ ಐಪಿಎಲ್‌ಗೆ ದುಬೈನಲ್ಲಿ ಚಾಲನೆ ಸಿಗಲಿದೆ. ಈಗಾಗಲೇ ತಂಡಗಳು ಕೂಡ ಕಳೆದ ಒಂದು ವಾರದಿಂದ ಅಭ್ಯಾಸದಲ್ಲಿ ತೊಡಗಿವೆ. ಲೀಗ್ ಪೂರ್ವಭಾವಿಯಾಗಿ ತಂಡಗಳು ಕೂಡ ಜೆರ್ಸಿ ಅನಾವರಣಗೊಳಿಸುತ್ತಿವೆ. ಈಗಾಗಲೇ ಆರ್‌ಸಿಬಿ, ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಜೆರ್ಸಿ ಅನಾವರಣಗೊಂಡರೆ, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿ ಅನಾವರಣಗೊಳಿಸಲಾಯಿತು. ಈ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ – ಕೆಕೆಆರ್ ಮುಖಾಮುಖಿ..?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶೇಕಡ 50 ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಸಂಸ್ಥೆಯೇ ತಂಡದ ಪ್ರಮುಖ ಪ್ರಾಯೋಜಕತ್ವ ಹೊಂದಿದೆ. ಜೆರ್ಸಿ ಮುಂಭಾಗ ಜೆಎಸ್‌ಡಬ್ಲ್ಯು ಎಂದು ಬರೆಯಲಾಗಿದ್ದು, ಎಂದಿನ ನೀಲಿ ಬಣ್ಣ ಜೆರ್ಸಿಯನ್ನೇ ಉಳಿಸಿಕೊಳ್ಳಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ವಿಟರ್‌ನಲ್ಲಿ ಜೆರ್ಸಿ ಅನಾವರಣೆ ವಿಡಿಯೋ ತುಣುಕೊಂದನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ಶಿಕ್ಷಕರ ದಿನದಂದು ಬಾಲ್ಯದ ಕೋಚ್ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು..?
ಸೆ.19 ರಿಂದ ಆರಂಭಗೊಳ್ಳಲಿರುವ ಟೂರ್ನಿಗೆ ಭಾನುವಾರ (ಸೆ.6) ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. 60 ದಿನಗಳ ಕಾಲ 53 ಪಂದ್ಯಗಳು ನಡೆಯಲಿವೆ.
DC 🤝🏻 JSW ➡️ The roar gets louder 🔥
With immense pride, we welcome @TheJSWGroup as our Principal Jersey Sponsor for #Dream11IPL 🙌🏻
A bond that gets stronger & makes us truly feel home on a new journey, in the new normal 💪🏻#YehHaiNayiDillipic.twitter.com/Bfx3Ed4FWh
— Delhi Capitals (@DelhiCapitals) September 4, 2020