ಮುಳುಗುತ್ತಿದ್ದ ತಾಯಿ ಮಗುವನ್ನು ರಕ್ಷಿಸಲು ಹೋದ ಆಟೋ ಚಾಲಕ ಸಾವು

ನವದೆಹಲಿ: ನೀರಿನಲ್ಲಿ ಮುಳುಗುತ್ತಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಲು ಹೋದ ಆಟೊರಿಕ್ಷಾ ಚಾಲಕನೇ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದೆ.

ಮಗುವನ್ನು ಹಿಡಿದಿದ್ದ ಮಹಿಳೆಯೊಬ್ಬರು ಮೀತಾಪುರ್‌ ಕಾಲುವೆ ಮೇಲಿನ ಸೇತುವೆ ಅಂಚಿನಲ್ಲಿ ನಿಂತಿರುವುದು ಕಂಡುಬಂದಿದೆ. ನಂತರ ಮಹಿಳೆ ನೀರಿಗೆ ಧುಮುಕಿದ್ದನ್ನು ಕಂಡ ಆಟೋಚಾಲಕ ಅರೆಕ್ಷಣವೂ ಯೋಚಿಸದೆ ಮಹಿಳೆ ಮತ್ತು ಮಗುವಿನ ರಕ್ಷಣೆಗೆಂದು ನೀರಿಗೆ ಧುಮುಕಿದ್ದಾನೆ. ನಂತರ ಸಹಾಯ ಮಾಡಿ ಎಂದು ಕಿರುಚಿದ್ದಾರೆ.

ಇದನ್ನು ಕಂಡ ಮತ್ತೆ ಮೂವರು ಮಾನವ ಸರಪಳಿ ಮಾಡಿಕೊಂಡು ಮಹಿಳೆ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಆದರೆ, ಚಾಲಕ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಪೊಲೀಸರು ಚಾಲಕನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸದ್ಯ ಮಹಿಳೆ ಮತ್ತು ಅಕೆಯ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ. ವಿಚಾರಣೆ ವೇಳೆ ಮಹಿಳೆಯು ಆತನ ಗಂಡನೊಂದಿಗೆ ಜಗಳವಾಗಿದ್ದರಿಂದಾಗಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು ಎಂದು ತಿಳಿದುಬಂದಿದೆ.

‘ಜೀವನ್​ ರಕ್ಷಾ’ ಶೌರ್ಯ ಪ್ರಶಸ್ತಿಗಾಗಿ ಆಟೋ ಚಾಲಕನ ಹೆಸರನ್ನು ಶಿಫಾರಸು ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)