More

    ದೆಹಲಿ ವಿಧಾನಸಭೆ ಚುನಾವಣೆಗೆ 57 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

    ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.

    ದೆಹಲಿ ವಿಧಾನಸಭಾ ಕ್ಷೇತ್ರ 70 ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ 57 ಮಂದಿಯನ್ನು ಆಯ್ಕೆ ಮಾಡಿದೆ. ಇದರಲ್ಲಿ 11 ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿಸಿದ್ದಾರೆ. ಇದರಲ್ಲಿ ನಾಲ್ವರು ಮಹಿಳೆಯರು ಇದ್ದಾರೆ ಎಂದು ಪ್ರತಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮನೋಜ್​ ತಿವಾರಿ ಹೇಳಿದರು.

    ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು: ರೋಹಿಣಿ ಕೇತ್ರದಿಂದ ವಿಜೇಂದರ್ ಗುಪ್ತಾ, ಮಾಡೆಲ್ ಟೌನ್‌ನಿಂದ ಎಎಪಿ ಮಾಜಿ ಶಾಸಕ ಕಪಿಲ್ ಮಿಶ್ರಾ, ಗ್ರೇಟರ್ ಕೈಲಾಶ್‌ ಕ್ಷೇತ್ರದಿಂದ ಶಿಖಾ ರೈ, ನರೇಲಾ ಕ್ಷೇತ್ರದಿಂದ ನೀಲ್​ಕಮಲ್​ ಕತ್ರಿ, ತಿಮಾರ್‌ಪುರದಿಂದ ಸುರೇಂದ್ರ ಸಿಂಗ್ ಬಿಟ್ಟು, ತುಘಲಕ್​ಬಾದ್‌ನಿಂದ ವಿಕ್ರಮ್ ಬಿಧುರಿ, ಚಾಂದನಿ ಚೌಕ್‌ನಿಂದ ಸುಮನ್ ಕುಮಾರ್ ಗುಪ್ತಾ, ಜನಕ್​ಪುರಿಯಿಂದ ಆಶಿಶ್ ಸೂದ್ ಹಾಗೂ ಪಾಟ್‌ಪರ್ಗಂಜ್‌ ಕ್ಷೇತ್ರದಿಂದ ರವಿ ನೇಗಿ ಕಣಕ್ಕೆ ಇಳಿಯುತ್ತಿದ್ದಾರೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರನ್ನು ರವಿನೇಗಿ ಎದುರಿಸುತ್ತಿದ್ದಾರೆ.

    ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸ್ಪರ್ಧಿಸುವ ನವದೆಹಲಿ ಕ್ಷೇತ್ರಕ್ಕೆ ಇನ್ನು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಆಮ್ ಆದ್ಮಿ ಪಕ್ಷ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ. ಕಾಂಗ್ರೆಸ್​ ಕೊನೆಗಳಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ನಿರ್ಧರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts