ಮುಗಳಖೋಡ: ಪದವಿ ಕಾಲೇಜಿನ ದಶಮಾನೋತ್ಸವ ಸಮಾರಂಭ

ಮುಗಳಖೋಡ: ಪಟ್ಟಣ ಚ.ವಿ.ವ.ಸಂಘದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದಶಮಾನೋತ್ಸವ ಸಮಾರಂಭ ಇತ್ತೀಚೆಗೆ ಜರುಗಿತು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ ಅಧ್ಯಕ್ಷತೆ ವಹಿಸಿದರು. ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ಕಾರ್ಯಕ್ರಮ ಉದ್ಘಾಟಿಸಿದರು.

ಡಾ.ಸಿ.ಆರ್.ಗುಡಸಿ, ಪಿಎಸ್‌ಐ ಕುಮಾರ ಹಿತ್ತಲಮನಿ, ಈರಣ್ಣಗೌಡ ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು. ಪಿ.ಬಿ.ಖೇತಗೌಡ, ಪಿ.ಎಂ.ಕುಲಿಗೋಡ, ಯಮನಪ್ಪ ಬಾಬನ್ನವರ, ಎಸ್.ಎ.ಯಡವನ್ನವರ, ಜಿ.ಬಿ.ಮುಧೋಳ, ಶಿವಬಸು ಕಾಪಸಿ, ಅಶೋಕ ಬಾಗಿ, ಪ್ರಾಚಾರ್ಯ ಡಾ.ವಿ.ಕೆ.ನಡೋಣಿ, ಪುರಸಭೆ ಸದಸ್ಯರಾದ ಕರೆಪ್ಪ ಮಂಟೂರ, ವಿಠ್ಠಲ ಯಡವನ್ನವರ, ರಾಮಣ್ಣ ಪಾಟೀಲ, ಮಹಾವೀರ ಕುರಾಡೆ, ಕಪೀಲ ಕರಿಭೀಮಗೋಳ, ಪ್ರತಾಪ ಶೇಗುಣಸಿ, ರವಿ ಹುಲ್ಲೋಳ್ಳಿ, ರಮೇಶ ಯಡವನ್ನವರ, ಗೋಪಾಲ ಯಡವನ್ನವರ, ಎಂ.ಕೆ.ಬೀಳಗಿ, ರಮೇಶ ಖೇತಗೌಡರ, ಸುರೇಂದ್ರ ಆದಪ್ಪಗೋಳ ಇತರರು ಇದ್ದರು. ಸಂಗಮೇಶ ಹಿರೇಮಠ ನಿರೂಪಿಸಿದರು. ಡಾ.ಪಿ.ಬಿ.ಕೊರವಿ ಸ್ವಾಗತಿಸಿದರು. ಪ್ರೊ.ಪ್ರಕಾಶ ಕಂಬಾರ ವಂದಿಸಿದರು.