More

    ಪತಂಜಲಿ ಯೋಗದ ವ್ಯಾಖ್ಯಾನಗಳು

    # ಯೋಗದ ಬಗೆಗಿನ ವ್ಯಾಖ್ಯಾನಗಳನ್ನು ತಿಳಿಸಿ.

    | ರಾಮನಾರಾಯಣ ಮುಂಬೈ

    ಪತಂಜಲಿ ಯೋಗದ ವ್ಯಾಖ್ಯಾನಗಳುಪತಂಜಲಿ ಮಹರ್ಷಿ ಯೋಗದ ಅತ್ಯಂತ ಅಧಿಕೃತ, ಪ್ರಾಚೀನವ್ಯವಸ್ಥೆಯ ಸ್ಥಾಪಕ ಪತಂಜಲಿಯವರನ್ನು ಯೋಗ ಸೂತ್ರಗಳ ಲೇಖಕ ಎಂದು ಕರೆಯಲಾಗುತ್ತದೆ. ಪತಂಜಲಿ ಋಷಿಗಳು ತಮ್ಮ ಯೋಗಗ್ರಂಥದಲ್ಲಿ ನೂರಕ್ಕೂ ಹೆಚ್ಚು ಸೂತ್ರಗಳನ್ನು ರಚಿಸಿದ್ದಾರೆ.

    ‘ಯೋಗ’ ಎನ್ನುವ ಪದವು ಸಂಸ್ಕೃತಮೂಲದ ಧಾತುವಾದ ‘ಯುಜ್’ ಎನ್ನುವುದರಿಂದ ಬಂದಿದ್ದು. ‘ಕೂಡಿಸು’, ‘ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು’ ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ‘ಯುಜ್ಯತೇ ಸಮಾಧೀಯತೇ ಅನೇನ ಇತಿ ಯೋಗಃ’ ಇದು ಯೋಗ ಶಬ್ದದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವುದು ಆತ್ಮಸಾಕ್ಷಾತ್ಕಾರದೆಡೆಗೆ (ಪರಮಾತ್ಮನೆಡೆಗೆ) ಒಯ್ಯುವುದೋ ಅದು ಯೋಗ.

    ಯೋಗದ ಪ್ರಮುಖ ವ್ಯಾಖ್ಯಾನಗಳು: ಯೋಗಃ ಚಿತ್ತ ವೃತ್ತಿ ನಿರೋಧಃ (ಪಾತಂಜಲ ಯೋಗಸೂತ್ರ) ‘ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆಹಿಡಿದು ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗ.’ ‘ಜೀವಾತ್ಮ ಪರಮಾತ್ಮ ಐಕ್ಯಾವಸ್ಥಾ ಯೋಗಃ’ ಅಂದರೆ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವ ಪ್ರಕ್ರಿಯೆಯೇ ಯೋಗ ಎಂದು ಶಾಂಡಿಲ್ಯ ಉಪನಿಷತ್ತು ತಿಳಿಸಿದೆ. ‘ಯೋಗಃ ಕರ್ಮಸು ಕೌಶಲಂ’ (ಭ.ಗೀ.:2.50) ಕೌಶಲಪೂರ್ಣವಾದ ಕೆಲಸವೇ ಯೋಗ. ‘ಸಮತ್ವಂ ಯೋಗ ಉಚ್ಯತೇ’ (ಭ.ಗೀ.:2.48) ಮನಸ್ಸಿನ ಸಮಸ್ಥಿತಿಯನ್ನು ಸಾಧಿಸುವುದೇ, ನೋವು ಮತ್ತು ದುಃಖಗಳ ಸ್ಪರ್ಶದಿಂದ ಬಿಡುಗಡೆಯಾಗುವುದೇ ಯೋಗ. ಮನಃ ಪ್ರಶಮನೋಪಾಯಃ ಯೋಗ ಇತ್ಯಭಿಧೀಯತೇ ವಸಿಷ್ಠ ಮಹರ್ಷಿಗಳು ತಮ್ಮ ಯೋಗಾವಸಿಷ್ಠ ಗ್ರಂಥದಲ್ಲಿ ತಿಳಿಸಿರುವಂತೆ, ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧ ಉಪಾಯವೇ ಯೋಗ. ತಾಂ ಯೋಗಮಿತಿ ಮನ್ಯಂತೇ ಸ್ಥಿರಮಿಂದ್ರಿಯಧಾರಣಂ – ಪಂಚೇಂದ್ರಿಯಗಳು ಮತ್ತು ಮನಸ್ಸಿನ ಸ್ಥಿರತೆ ಸಾಧಿಸಿ, ಸಮಾಧಿ ಸ್ಥಿತಿಯಲ್ಲಿ ಇರುವುದೇ ಯೋಗ. ಚಂಚಲವಾದ ಮನಸ್ಸನ್ನು ಒಂದೆಡೆ ನಿಲ್ಲಿಸುವುದೇ ಯೋಗ. ಯೋಗದ ವಿಶಾಲವಾದ ಅರ್ಥ – ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಿತಿಗೆ ತರುವುದು ಎಂದು ವ್ಯಾಖ್ಯಾನಿಸಲಾಗಿದೆ.

    # ಮಹರ್ಷಿ ಪತಂಜಲಿ ತಿಳಿಸಿದ ‘ಅಥ ಯೋಗಾನುಶಾಸನಂ’ ಸೂತ್ರದ ಅರ್ಥವೇನು?

    | ಪದ್ಮನಾಭ ಬೆಂಗಳೂರು

    ಪತಂಜಲಿಗಳು ಯೋಗಶಾಸ್ತ್ರದ ಮೊದಲ ಅಧ್ಯಾಯದಲ್ಲಿ ಈ ಸೂತ್ರವನ್ನು ಹೇಳಿದ್ದಾರೆ. ಯೋಗದ ಅಧ್ಯಯನ ಮತ್ತು ಅಭ್ಯಾಸದ ಪರಿಚಯವಾಗಿದೆ. ಅಥ ಎಂದರೆ ವಿವರಣೆಯನ್ನು ಪರಿಚಯಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಯೋಗ ಎಂದರೆ ಏಕತೆ, ಸಾಮರಸ್ಯ. ಅನುಶಾಸನಂ ಎಂದರೆ ಅನುಭವದ ಪರಿಚಯ, ಸೂಚನೆ, ಶಿಸ್ತು ಆಗಿದೆ. ಮೊದಲ ಹಂತಗಳು ಯಾವಾಗಲೂ ಕಠಿಣವಾಗಿದೆ. ಏಕಾಗ್ರತೆ ಮತ್ತು ಆಲೋಚನೆಯ ಕಾರ್ಯದ ಮೂಲಕ ತಿಳಿದುಕೊಳ್ಳುವುದು.

    ಅಶುದ್ಧ ಮನಸ್ಸು ಮತ್ತು ಅಲೆದಾಡುವ ಪ್ರವೃತ್ತಿ ಇರುವವರು ಈ ಶಾಸ್ತ್ರದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಭ್ಯಾಸವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts