ಮಲೇಷ್ಯಾ ವಿರುದ್ಧ ಭಾರತಕ್ಕೆ ಸೋಲು

ನಾನಿಂಗ್ (ಚೀನಾ): ಭಾರತ ತಂಡ ಸುಧೀರ್​ವುನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಲೇಷ್ಯಾ ತಂಡಕ್ಕೆ 2-3 ರಿಂದ ಶರಣಾಗಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅನುಭವಿ ಕೆ.ಶ್ರೀಕಾಂತ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಸಮೀರ್ ವರ್ಮ ನಿರಾಸೆ ಅನುಭವಿಸಿದರು. ಈ ಸೋಲಿನೊಂದಿಗೆ ಭಾರತದ ನಾಕೌಟ್ ಹಂತದ ಹಾದಿ ಕಠಿಣಗೊಂಡಿತು. ಬುಧವಾರ ನಡೆಯಲಿರುವ ನಿರ್ಣಾಯಕ ಹೋರಾಟದಲ್ಲಿ 8ನೇ ಶ್ರೇಯಾಂಕದ ಭಾರತ 10 ಬಾರಿಯ ಚಾಂಪಿಯನ್ ಬಲಿಷ್ಠ ಚೀನಾ ತಂಡವನ್ನು ಎದುರಿಸಲಿದೆ. ನಾಕೌಟ್ ಹಂತಕ್ಕೇರಲು ಭಾರತ ಕನಿಷ್ಠ ಎರಡು ಪಂದ್ಯಗಳಲ್ಲಿ ಜಯಿಸಲೇಬೇಕಿದೆ.

ಸಿಂಧು, ಅಶ್ವಿನಿ ಜೋಡಿಗೆ ಜಯ: ಮಿಶ್ರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿ 16-21, 21-17, 24-22 ಗೇಮ್ಳಿಂದ ಗೊ ಸೂನ್ ಹಂಟ್- ಲೀ ಶೇವೊನ್ ಜೆಮೀ ಜೋಡಿ ಎದುರು ಜಯ ಸಾಧಿಸಿದರೆ, ಮಹಿಳಾ ಸಿಂಗಲ್ಸ್​ನಲ್ಲಿ ಪಿವಿ ಸಿಂಧು 21-12, 21-8 ರಿಂದ ಗೋ ಜಿಂಗ್ ವೆಲ್​ರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್​ನಲ್ಲಿ ಸಮೀರ್ ವರ್ಮ, ಪುರುಷರ ಡಬಲ್ಸ್​ನಲ್ಲಿ ಮನು ಅತ್ರಿ-ಸುಮಿತ್ ರೆಡ್ಡಿ, ಮಹಿಳಾ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಸೋಲು ಕಂಡಿತು.