VIDEO| ಮದುವೆ ನಂತರ ಲಿಪ್​ಲಾಕ್​ ದೃಶ್ಯದಲ್ಲಿ ಡಿಪ್ಪಿ ಅಭಿನಯ: ವೈರಲ್​ ಆಯ್ತು ಕಿಸ್ಸಿಂಗ್​ ವಿಡಿಯೋ

ಮುಂಬೈ: ಬಾಲಿವುಡ್​ನ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರು ಮದುವೆಯಾದ ಬಳಿಕ ಬಣ್ಣ ಹಚ್ಚಿರುವ ಬಹು ನಿರೀಕ್ಷಿತ ‘ಛಪ್ಪಾಕ್​’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೂಟಿಂಗ್​ ಸೆಟ್​ನಿಂದ ದಿನಕ್ಕೊಂದು ಬ್ರೇಕಿಂಗ್​ ನ್ಯೂಸ್​ ಬರುತ್ತಿರುವುದರಿಂದ ಚಿತ್ರದ ಮೇಲೆ ಹೈಪ್​ ಕ್ರಿಯೇಟ್​ ಆಗಿದೆ. ಇದೀಗ ಚಿತ್ರದ ಲಿಪ್​ಲಾಕ್​ ದೃಶ್ಯ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಟ ವಿಕ್ರಾಂತ್​​ ಮ್ಯಾಸ್ಸೆಯೊಂದಿಗಿನ ದೀಪಿಕಾ ಪಡುಕೋಣೆ ಅವರ ಲಿಪ್​ಲಾಕ್​ ಸನ್ನಿವೇಶದ ವಿಡಿಯೋ ತುಣುಕೊಂದು ಸೋರಿಕೆಯಾಗಿದೆ. 20 ಸೆಕೆಂಡ್​ ಉದ್ದದ ವಿಡಿಯೋ ತುಣುಕಿನಲ್ಲಿ ಕಟ್ಟಡದ ಛಾವಣಿ ಮೇಲೆ ಕುಳಿತು ನಟ ಮ್ಯಾಸ್ಸೆ ನಟಿ ದೀಪಿಕಾ ಅವರಿಗೆ ಚುಂಬಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ವೇಳೆ ಕಟ್ಟಡದ ಕೆಳಗೆ ನಿಂತು ಚಿತ್ರೀಕರಣ ವೀಕ್ಷಿಸುತ್ತಿದ್ದ ಜನರ ಗುಂಪು ಚಿಯರ್​ ಅಪ್​ ಮಾಡುತ್ತಿರುವುದು ಕೇಳಿಸುತ್ತದೆ. ಇದಲ್ಲದೆ, ಈ ಹಿಂದೆ ದೀಪಿಕಾ ಅವರು ಶಾಲಾ ಯೂನಿಫಾರ್ಮ್​ನಲ್ಲಿರುವ ವಿಡಿಯೋ ತುಣುಕೊಂದು ಕೂಡ ಸೋರಿಕೆಯಾಗಿತ್ತು.

ಆ್ಯಸಿಡ್​ ದಾಳಿಗೆ ಒಳಗಾದ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್​ ಅವರ ಜೀವನಾಧರಿತ ಚಿತ್ರ ಇದಾಗಿದ್ದು, ಡಿಪ್ಪಿ ಅವರು ಇಲ್ಲಿ ಲಕ್ಷ್ಮೀ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜೀವನದಲ್ಲಿ ಎದುರಾದಂತಹ ಅಡೆತಡೆಗಳನ್ನು ಕೆಚ್ಚದೆಯಿಂದ ಮೆಟ್ಟಿನಿಂತ ಧೀರ ಮಹಿಳೆ ಲಕ್ಷ್ಮೀ ಅವರ ಸ್ಫೂರ್ತಿದಾಯಕ ಅಂಶ ಚಿತ್ರಕತೆಯಲ್ಲಿದೆ.

ಲಕ್ಷ್ಮೀ ಅಗರ್​ವಾಲ್​ ಯಾರು?
ಲಕ್ಷ್ಮೀ ಅವರು 15 ವರ್ಷದವರಿದ್ದಾಗ ಅಂದರೆ 2005ರಲ್ಲಿ ಆ್ಯಸಿಡ್​ ದಾಳಿಗೆ ತುತ್ತಾಗಿದ್ದರು. ತನ್ನ ಕುಟುಂಬವರಿಗೆ ಪರಿಚಿತನಾಗಿದ್ದ 32 ವರ್ಷದ ವ್ಯಕ್ತಿಯೊಬ್ಬ ಪ್ರೀತಿ ಮಾಡುವಂತೆ ಲಕ್ಷ್ಮಿಯ ಹಿಂದೆ ಬಿದ್ದಿದ್ದ. ಅದನ್ನು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದ. ಈ ಘಟನೆಯಲ್ಲಿ ಲಕ್ಷ್ಮೀ ಅವರ ಮುಖ ಕುರೂಪವಾಗಿತ್ತು. ಆದರೆ, ಇದರಿಂದ ಧೃತಿಗೆಡದ ಲಕ್ಷ್ಮೀ ಆತನ ವಿರುದ್ಧ ಹೋರಾಡಿ ಜಯಗಳಿಸಿದ್ದಳು. ಅಲ್ಲದೆ, ಆ್ಯಸಿಡ್​ ಮಾರಾಟ ವಿಚಾರದಲ್ಲಿ ಸುಪ್ರೀಂಕೋರ್ಟ್​ ಮೆಟ್ಟಿಲನ್ನು ಹತ್ತಿ ಆ್ಯಸಿಡ್​ ಮಾರಟಕ್ಕೆ ಕಡಿವಾಣ ತಂದಳು. ಅಲ್ಲದೆ, ಆ್ಯಸಿಡ್​ ಮಾರಾಟವನ್ನು ತಡೆಯುವ ಅಭಿಯಾನವನ್ನು ಲಕ್ಷ್ಮೀ ಅವರು ಕೈಗೊಂಡಿದ್ದಾರೆ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್​ ನಂತರ ದೀಪಿಕಾ ಪಡುಕೋಣೆ ಅವರಿಗೆ ನಿಜ ಜೀವನಾಧರಿತವಾದ ಎರಡನೇ ಚಿತ್ರ ಇದಾಗಿದ್ದು, 2020ರ ಜನವರಿ 10 ರಂದು ಚಿತ್ರವು ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)