ಶಾರುಖ್ ಸ್ಥಾನ ಕಸಿದುಕೊಂಡ ದೀಪಿಕಾ!

ಟ ಶಾರುಖ್ ಖಾನ್ ಪಾಲಿಗೆ ಸದ್ಯಕ್ಕಂತೂ ಟೈಮ್ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗಷ್ಟೇ ಅವರ ನಟನೆಯ ‘ಜೀರೋ’ ಸಿನಿಮಾ ತೆರೆಕಂಡು ಹೀನಾಯವಾಗಿ ಸೋಲುಂಡಿತು. ಅದೂ ಸಾಲದೆಂಬಂತೆ ಜಾಹೀರಾತು ಕ್ಷೇತ್ರದಲ್ಲೂ ಅವರಿಗೆ ಭಾರಿ ಹಿನ್ನಡೆ ಆಗಿದೆ. 2018ನೇ ವರ್ಷದ ಸೆಲೆಬ್ರಿಟಿ ಬ್ರಾ್ಯಂಡ್ ವ್ಯಾಲ್ಯೂ ಪಟ್ಟಿಯನ್ನು ಖಾಸಗಿ ಸಂಸ್ಥೆ ಬಿಡುಗಡೆ ಮಾಡಿದ್ದು, ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಶಾರುಖ್ ಈ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. 170.9 ಮಿಲಿಯನ್ ಡಾಲರ್ ಬ್ರಾ್ಯಂಡ್ ವ್ಯಾಲ್ಯೂ ಹೊಂದುವ ಮೂಲಕ ಕ್ರಿಕೆಟಿಗ ವಿರಾಟ್ ಕೊಹ್ಲಿ ನಂ.1 ಪಟ್ಟ ಪಡೆದುಕೊಂಡಿದ್ದಾರೆ. ಕಳೆದ ವರ್ಷವೂ ವಿರಾಟ್ ಅಗ್ರ ಸ್ಥಾನದಲ್ಲಿದ್ದರು. 2018 ನವೆಂಬರ್​ವರೆಗೆ 24 ಕಂಪನಿಗಳಿಗೆ ರಾಯಭಾರಿ ಆಗಿರುವ ಅವರ ಬ್ರಾ್ಯಂಡ್ ವ್ಯಾಲ್ಯೂ 2017ಕ್ಕೆ ಹೋಲಿಸಿದರೆ ಶೇ. 18 ಹೆಚ್ಚಾಗಿದೆ ಎನ್ನುತ್ತಿದೆ ವರದಿ. ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಶಾರುಖ್ 60.7 ಮಿಲಿಯನ್ ಡಾಲರ್ ಬ್ರಾ್ಯಂಡ್ ವ್ಯಾಲ್ಯೂ ಹೊಂದಿದ್ದಾರೆ.

2017ರಲ್ಲಿ ಶಾರುಖ್ ಪಾಲಿಗಿದ್ದ 2ನೇ ಸ್ಥಾನವನ್ನು 2018ರ ಸಾಲಿನಲ್ಲಿ ನಟಿ ದೀಪಿಕಾ ಪಡುಕೋಣೆ ಕಸಿದುಕೊಂಡಿದ್ದಾರೆ. 21 ಕಂಪನಿಗಳ ರಾಯಭಾರಿ ಆಗಿರುವ ದೀಪಿಕಾ ಬ್ರಾ್ಯಂಡ್ ವ್ಯಾಲ್ಯೂ 102.5 ಮಿಲಿಯನ್ ಡಾಲರ್. ಉಳಿದಂತೆ ನಟ ಅಕ್ಷಯ್ ಕುಮಾರ್​ಗೆ (67.3 ಮಿ. ಡಾಲರ್) ಮೂರನೇ ಸ್ಥಾನ ಸಿಕ್ಕಿದೆ. 93 ಮಿಲಿಯನ್ ಡಾಲರ್ ಬ್ರಾ್ಯಂಡ್ ವ್ಯಾಲ್ಯೂ ಇರುವ ರಣವೀರ್ ಸಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್)